ASI ಆತ್ಮಹತ್ಯೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿ ಕೊಂಡ ಶಿವಕುಮಾರಸ್ವಾಮಿ…..

Suddi Sante Desk

ಮೈಸೂರು –

ಡೆತ್ ನೋಟ್ ಬರೆದಿಟ್ಟು Asi ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ನಲ್ಲಿ ನಡೆದಿದೆ ಹೌದು ನಗರದ ಟ್ರಾಫಿಕ್ ಎಎಸ್ ಐ ಆತ್ಮಹತ್ಯೆ ಮಾಡಿಕೊಂಡ ವರಾಗಿದ್ದು ನಗರದ ಗೌರಿ ಶಂಕರ ನಗರದಲ್ಲಿ ನಡೆದಿದೆ.

ಇನ್ನೂ ವಿವಿ ಪುರಂ ಟ್ರಾಫಿಕ್ ಠಾಣೆಯ ಎಎಸ್ ಐ ಶಿವಕುಮಾರಸ್ವಾಮಿ(54) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿಯಾಗಿದ್ದಾರೆ.ಕೌಟುಂಬಿಕ ಕಲಹ ದಿಂದಾಗಿ ಎಎಸ್ ಐ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂ ಡಿರಬಹುದು ಎಂದು ಶಂಕಿಸಲಾಗಿದೆ.ಈ ಕುರಿತು ಕೆ.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಪೊಲೀಸರ ತನಿಖೆಯಿಂದ ಅವರ ಸಾವಿಗೆ ನಿಜವಾದ ಕಾರಣ ತಿಳಿದು ಬರಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.