ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ವಶ – ಲಾರಿ ಸಮೇತವಾಗಿ ವಶಕ್ಕೆ ತೆಗೆದುಕೊಂಡ ಪೊಲೀಸರು

Suddi Sante Desk

ಮಂಡ್ಯ –

ಮಂಡ್ಯದಲ್ಲಿ ನಿಲ್ಲದ ಪಾಲಿಶ್ ಅಕ್ಕಿ ಮಾರಾಟ ದಂಧೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಕ್ಯಾಂಟರ್ ಜಪ್ತಿ ಮಾಡಿದ ಪೊಲೀಸರು.ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಈ ಒಂದು ಘಟನೆ ನಡೆದಿದೆ.ಅಕ್ರಮವಾಗಿ ಪಡಿತರ ಅಕ್ಕಿಮೂಟೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ನೊಂದಿಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ

ರೈಸ್ ಮಿಲ್ ಗೆ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು ಅನ್ನೋ ಮಾಹಿತಿಯಿಂದಲೇ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧನ ಮಾಡಲಾಗಿದೆ.ಮಾಹಿತಿ ಮೇರೆಗೆ ಲಾರಿ ತಡೆದು ಪೊಲೀಸರ ಪರಿಶೀಲನೆ ಮಾಡಿ ದಾಗ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ.ಲಾರಿಯಲ್ಲಿದ್ದ 150 ಮೂಟೆ ಅಕ್ಕಿಯನ್ನು ವಾಹನದ ಸಮೇತ ಜಪ್ತಿ ಮಾಡಲಾಗಿದೆ.ಚಾಲಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ ಪೋಲಿಸರು.ಮಂಡ್ಯ ಪಶ್ವಿಮ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.