ಸರ್ಕಾರಿ ಶಾಲೆಗಳಲ್ಲಿ ಸೋಂಕಿಲ್ಲ ನವೋದಯ,ವಸತಿ ಶಾಲೆಗಳಲ್ಲಿ ಅಷ್ಟೇ ಶಿಕ್ಷಣ ಸಚಿವರ ಮಾಹಿತಿ…..

Suddi Sante Desk

ಬೆಂಗಳೂರು –

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದೆರೆಡು ಪ್ರಕರಣ ಬಿಟ್ಟರೆ ಇನ್ನೂಳಿದ ಎಲ್ಲಿಯೂ ಸೋಂಕಿಲ್ಲ ನವೋದಯ ವಸತಿ ಶಾಲೆಗಳಲ್ಲಿ ಅಷ್ಟೇ ಹೆಚ್ಚಾಗಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾಹಿತಿ ನೀಡಿದರು ಬೆಂಗಳೂರಿನಲ್ಲಿ ಮಾತನಾ ಡಿದ ಅವರು ಸೋಂಕು ಕಂಡು ಬಂದಿರುವುದು ವಸತಿ ಶಾಲೆಗಳಲ್ಲಿ ಮತ್ತು ನವೋದಯ ಶಾಲೆಗಳಲ್ಲಿ ಎಂದಿದ್ದಾರೆ.

ಶಾಲಾ ಮಟ್ಟದಲ್ಲಿ 1 ರಿಂದ 10 ನೆ ತರಗತಿವರಗೆ ಸರ್ಕಾರಿ ಸರ್ಕಾರಿ ಶಾಲೆಗಳಲ್ಲಿ ಸೋಂಕಿಲ್ಲ.ವಸತಿ ಮತ್ತು ನವೋ ದಯ ಶಾಲೆಗಳಲ್ಲಿ ಸೋಂಕು ಇದ್ದು ಈ ಒಂದು ಹಿನ್ನೆಲೆ ಯಲ್ಲಿ ಅಗತ್ಯ ಕ್ರಮ ತಗೆದುಕೊಳ್ಳುತೇವೆ ಮಕ್ಕಳಿಗೆ ತೊಂದರೆ ಆಗಿಲ್ಲ ಚಿಕಿತ್ಸೆ ಕೊಡಲಾಗುತ್ತಿದೆ ಎಂದರು

ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುತ್ತೇವೆ ನೀತಿ ಸಂಹಿತೆ ಮುಗಿದ ಬಳಿಕ ನಾನು ಸೋಂಕಿತ ವಸತಿ ಮತ್ತು ನವೋದಯ ಶಾಲೆಗಳಿಗೆ ಭೇಟಿ ಕೊಡುತ್ತೇನೆ ವಸತಿ ಶಾಲೆಗಳಲ್ಲಿ ಎಸ್.ಓ.ಪಿ ಪಾಲನೆ ಆಗ್ತಿದೆಯಾ, ಇಲ್ಲವಾ ಎಂಬುವುದನ್ನು ಸ್ವತಃ ಜಿಲ್ಲಾಧಿಕಾರಿ ಗಳಿಗೆ ಪರಿಶೀಲಿಸುವಂತೆ ಹೇಳಲಾಗಿದೆ ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.