ನವದೆಹಲಿ –
2026 ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕದ ಖಾತೆ ತೆರೆದಿದೆ ಹೌದು ಭಾರತೀಯ ವೇಟ್ಲಿಫ್ಟಿಂಗ್ನ ರಾಣಿ ಎಂದು ಕರೆಯಲ್ಪಡುವ ಸೈಖೋಮ್ ಮೀರಾಬಾಯಿ ಚಾನು ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದು, ಮಹಿಳೆಯರ 48 ಕೆಜಿ ವಿಭಾಗ ದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಮೀರಾಬಾಯಿ ಚಾನು ಅವರ ಸತತ ಮೂರನೇ ಚಿನ್ನದ ಪದಕವಾಗಿದ್ದು, ಇದ ರೊಂದಿಗೆ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಮೀರಾಬಾಯಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಒಟ್ಟು 190 ಕೆಜಿ ಭಾರ ಎತ್ತಿ ಸ್ವರ್ಣವನ್ನು ತನ್ನದಾಗಿಸಿಕೊಂಡರು. ಈ ಹಿಂದೆ ಅವರು 2014 ರ ಗೋಲ್ಡ್ ಕೋಸ್ಟ್ ಮತ್ತು 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ಭಾರತಕ್ಕೆ ಚಿನ್ನದ ಪದಕ ಗಳನ್ನು ಗೆದ್ದಿದ್ದರು
ಸ್ನ್ಯಾಚ್ ಸುತ್ತಿನಲ್ಲಿ 85 ಕೆಜಿ ತೂಕ ಎತ್ತಿದ ಮೀರಾಬಾಯಿ ಕಾಮನ್ವೆಲ್ತ್ನಲ್ಲಿ ಹೊಸ ದಾಖಲೆ ಸೃಷ್ಟಿಸಿದರು. ನಂತರ ಅವರು ಕ್ಲೀನ್ ಮತ್ತು ಜರ್ಕ್ನಲ್ಲಿ 105 ಕೆಜಿ ಎತ್ತುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.ಇನ್ನೂ ಮೀರಾ ಬಾಯಿ ಚಾನು 190 ಕೆಜಿ ತೂಕ ಎತ್ತಿದರು.ಮಣಿಪುರದ ಇಂಫಾಲದವರಾದ ಸೈಖೋಮ್ ಮೀರಾಬಾಯಿ ಚಾನು ಭಾರತದ ಅತ್ಯಂತ ಯಶಸ್ವಿ ಮತ್ತು ದಂತಕಥೆಯ ವೇಟ್ಲಿಫ್ಟ ರ್ಗಳಲ್ಲಿ ಒಬ್ಬರು
ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ಗೆಲ್ಲುವುದರಿಂದ ಹಿಡಿದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸತತ ಮೂರು ಚಿನ್ನದ ಪದಕಗಳನ್ನು ಗೆಲ್ಲುವವರೆಗೆ, ಮೀರಾಬಾಯಿ ಚಾನು ಭಾರತಕ್ಕೆ ಹಲವಾರು ಪದಕಗಳನ್ನು ಗೆದ್ದಿದ್ದಾರೆ.13 ವರ್ಷದವರಿದ್ದಾಗ ತರಬೇತಿ ಪ್ರಾರಂಭಿಸಿದ ಮೀರಾಬಾಯಿ ಚಾನು ಅವರ ಪ್ರಯಾಣ ಸುಲಭವಾಗಿರಲಿಲ್ಲ ಆರಂಭಿಕ ದಿನಗಳಲ್ಲಿ, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರಿಗೆ ಸರಿಯಾದ ತರಬೇತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎಂದಿಗೂ ತಮ್ಮ ಛಲ ಬಿಡದ ಮೀರಾಬಾಯಿ ಇಂದು ಪ್ರಪಂಚದಾದ್ಯಂತ ಭಾರತಕ್ಕೆ ಕೀರ್ತಿ ತರುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..



