ಊಟದ ನಂತರ ಅಸ್ವಸ್ಥ ಗೊಂಡ ಶಾಲೆಯ ಮಕ್ಕಳು 40 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಆಸ್ಪತ್ರೆಗೆ ದಾಖಲು ಮಕ್ಕಳಿಗೆ ಚಿಕಿತ್ಸೆ…..

Suddi Sante Desk

ದಾವಣಗೆರೆ –

ಊಟ ಮಾಡಿದ ನಂತರ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ದಾವಣಗೆರೆ ಯಲ್ಲಿ ನಡೆದಿದೆ. ಹೌದು ಸಧ್ಯ ಅಸ್ವಸ್ಥಗೊಂಡ ಈ ಎಲ್ಲಾ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆಅಲ್ಪ ಸಂಖ್ಯಾತರ ಮೊರಾರ್ಜಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಈ ಒಂದು ಘಟನೆ ಕಂಡು ಬಂದಿದೆ.ವಿಷಯುಕ್ತ ಆಹಾರ ಸೇವಿಸಿ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿ ದ್ದು ಜಗಳೂರಿನಲ್ಲಿ ನಡೆದಿದೆ.ಅಸ್ವಸ್ಥಗೊಂಡ ವಿದ್ಯಾರ್ಥಿ ಗಳನ್ನು ಅಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 107 ಬಾಲಕಿಯರ ಹಾಜರಾತಿ ಇದ್ದು. ಇದರಲ್ಲಿ 40ಕ್ಕೂ ಹೆಚ್ಚು ಮಕ್ಕಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.ಚಪಾತಿ,ಬಿಟ್ರೋಟ್ ಪಲ್ಯ ಊಟ ಮಾಡಿದ್ದರು.ಅಲ್ಲದೆ ಬೆಳಗ್ಗೆ 9ಕ್ಕೆ ಉಪಹಾರ ಅವಲಕ್ಕಿ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.

10 ಗಂಟೆಯ ವೇಳೆಗೆ ಇಬ್ಬರಲ್ಲಿ ಹೊಟ್ಟೆನೋವು ಕಾಣಿಸಿ ಕೊಂಡಿದ್ದು ಬಳಿಕ ಇತರ ವಿದ್ಯಾರ್ಥಿನಿಯರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ.ಕೂಡಲೇ ಸಾರ್ವಜನಿಕರ ಸಹಾಯದಿಂದ ವಿದ್ಯಾರ್ಥಿ ಗಳನ್ನು ಶಿಕ್ಷಕರು ಅಂಬ್ಯುಲೆನ್ಸ್ ಹಾಗೂ ಸರ್ಕಾರಿ ವಾಹನ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ ತಹಶೀಲ್ದಾರ್ ಶಶೀಧರಯ್ಯ, ಪ.ಪಂ.ಅಧ್ಯಕ್ಷ ಎಸ್.ಸಿದ್ದಪ್ಪ, ಪಟ್ಟಣ ಪಂಚಾಯತಿ ಸದಸ್ಯರು ಯುವ ಮುಖಂಡರು.ಪ್ರಗತಿಪರ ಸಂಘಟನೆ ಗಳ ಮುಖಂಡರು ಭೇಟಿ ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು.ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ.ನಿರಾಜ್ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗ ರಾಜ್ ಮತ್ತು ಮಕ್ಕಳ ತಜ್ಞ ವೈದ್ಯ ಜಯಕು ಮಾರ್ ಮತ್ತು ವೈದ್ಯರ ಮತ್ತು ನರ್ಸ್‍ಗಳು ಚಿಕಿತ್ಸೆ ನೀಡುತ್ತಿ ದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.