ಧಾರವಾಡ –
ಧಾರವಾಡದಲ್ಲಿ PDO ಒಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.NREG ಯೋಜನೆ ಯಲ್ಲಿ ಕಾಮಗಾರಿ ಮಾಡಿದ ಬಿಲ್ ಬಿಡುಗಡೆ ಮಾಡುವ ವಿಚಾರ ಕುರಿತು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ದೇವರಹುಬ್ಬ ಳ್ಳಿಯ ಗ್ರಾಮ ಪಂಚಾಯತಿ PDO ಮಹಮ್ಮದ್ ಯೂಸುಫ್ ಚಕೋಲಿ ಎಂಬುವರೇ ಟ್ರ್ಯಾಪ್ ಆದ PDO ಆಗಿದ್ದಾರೆ.
ದೇವರ ಹುಬ್ಬಳ್ಳಿ ಗ್ರಾಮದ ಆರೇರ ಎಂಬುವರು NREG ಯೋಜನೆಯಡಿಯಲ್ಲಿ ಪೇವರ್ ಹಾಕಿದ್ದರು ಈ ಒಂದು ಕಾಮಗಾರಿಗೆ ಬಿಲ್ ಬಿಡುಗಡೆ ಮಾಡಲು ಹತ್ತು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಒಂದು ಕುರಿತು ಆರೇರ ಅವರು ಎಸಿಬಿ ಗೆ ದೂರನ್ನು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಿದ ಎಸಿಬಿ ಡಿವೈಎಸ್ಪಿ ವೇಣುಗೋಪಾಲ ಇನ್ಸ್ಪೆಕ್ಟರ್ ಎಮ್ ಜಿ ಹಿರೇಮಠ, ಬಿ ಎ ಜಾಧವ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಟ್ರ್ಯಾಪ್ ಮಾಡಲಾಗಿದೆ. ಇನ್ನೂ ಈ ಒಂದು ಕಾರ್ಯಾಚರಣೆ ಯಲ್ಲಿ ಸಿಬ್ಬಂದಿ ಗಳಾದ ಲೋಕೇಶ್ ಬೆಂಡಿಕಾಯಿ, ಗಿರೀಶ್ ಮನಸೂರ ಸೇರಿದಂತೆ ಹಲವರು ಪಾಲ್ಗೊಂ ಡಿದ್ದಾರೆ.ಸಧ್ಯ PDO ಅವರನ್ನು ವಶಕ್ಕೆ ತೆಗೆದುಕೊಂ ಡು ವಿಚಾರಣೆ ಮಾಡುತ್ತಿದ್ದಾರೆ