ಧಾರವಾಡ –
ಕೆಲಸವನ್ನು ಕೊಡಿಸುವುದಾಗಿ ಹೇಳಿ ಯುವತಿ ಯನ್ನು ಮಾರಾಟಕ್ಕೆ ಯತ್ನಿಸಿದ ಘಟನೆ ಧಾರವಾಡ ದಲ್ಲಿ ಬೆಳಕಿಗೆ ಬಂದಿದೆ.ಧಾರವಾಡದ ಅಮ್ಮಿನಬಾವಿ ಗ್ರಾಮದ ಮಹಿಳೆಯನ್ನು ಗುಜರಾತ್ ಮತ್ತು ಮುಂಬೈ ನಲ್ಲಿ ಮಾರಾಟಕ್ಕೆ ಯತ್ನಿಸಲಾಗುತ್ತಿದ್ದಂತೆ

ಪರಿಚಯಸ್ಥ ವ್ಯಕ್ತಿಯಿಂದ ಈ ಒಂದು ಮಾರಾಟ ವನ್ನು ಮಾಡಲಾಗುತ್ತಿದ್ದು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ ಪ್ರೀತಿ ಎಂಬ ಮಹಿಳೆ. ಧಾರವಾಡ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಮಹಿಳೆಯಾಗಿ ದ್ದು ದಿಲೀಪ್ ಜೈನ್ ಎಂಬುವರು ಪ್ರೀತಿ ಎಂಬ ಯುವತಿಯನ್ನು ಮಾರಾಟ ಮಾಡಲು ಮುಂದಾಗಿದ್ದ ಎಂಬ ಆರೋಪ ಕೇಳಿ ಬಂದಿದೆ.


ಧಾರವಾಡದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರೀತಿ ಈ ಒಂದು ಸಮಯದಲ್ಲಿ ದಿಲೀಪ್ ಜೈನ್ ಎಂಬುವರಿಗೆ ಪರಿಚಯವಾಗಿ ಯುವತಿಯ ಬಡತನವನ್ನೇ ಬಂಡವಾಳ ಮಾಡಿಕೊಂಡಿದ್ದ ದಿಲೀಪ್ ಜೈನ್.


ಇದೇ ಒಂದು ವಿಚಾರವಾಗಿ ಕೆಲಸ ಕೊಡಿಸುವುದಾಗಿ ಹೇಳಿ ಬೆಂಗಳೂರಿಗೆ ಎಂದು ಹೇಳಿ ಗುಜರಾತ್ ಗೆ ಕರೆದುಕೊಂಡು ಹೋಗಿದ್ದ ದಿಲೀಪ್ .ಸಧ್ಯ ಅಲ್ಲಿಂದ ತಪ್ಪಿಸಿಕೊಂಡು ಬಂದಿರುವ ಪ್ರೀತಿ ದಿಲೀಪ್ ಮೇಲೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದು ಸಧ್ಯ ದೂರನ್ನು ಸ್ವೀಕಾರ ಮಾಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.