ಹುಬ್ಬಳ್ಳಿ –
ಹಾಡು ಹಗಲೇ ವ್ಯಕ್ತಿಯೊಬ್ಬನನ್ನು ಚಾಕು ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ನಗರದ ಬಾಬಾಸಾನ್ ಗಲ್ಲಿಯಲ್ಲಿ ಈ ಒಂದು ಘಟನೆ ನಡೆದಿದೆ .ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ನಗರದ ಬಾಬಾಸಾನ್ ಗಲ್ಲಿಯಲ್ಲಿ ಚಾಕು ಇರಿದು ಕೊಲೆ ಮಾಡಲಾಗಿದೆ.
ಕಮರಿಪೇಟೆಯ ರಮೇಶ ಭಾಂಡಗೆ ಎಂಬುವವರಿಗೆ ಚಾಕು ಇರಿತವನ್ನು ಮಾಡಿ ಕೊಲೆ ಮಾಡಲಾಗಿದೆ. ರಮೇಶ ಭಾಂಡಗೆ ಹಲವು ಅಕ್ರಮ ಧಂದೆಯಲ್ಲಿ ಭಾಗಿಯಾಗಿದ್ದನಂತೆ .ಹುಬ್ಬಳ್ಳಿಯಲ್ಲಿ ಸ್ಪಿರಿಟ್ ಕಿಂಗ್ ಎಂದೇ ರಮೇಶ ನನ್ನು ಹಾಡು ಹಗಲೇ ಚಾಕು ಇರಿದು ಕೊಲೆ ಮಾಡಲಾಗಿದೆ. – ಸ್ಪಿರಿಟ್ ಕಿಂಗ್ ನ ಅಕ್ರಮ ದಂಧೆಯಿಂದ ಬೇಸತ್ತ ದುಷ್ಕರ್ಮಿಗಳು ಇವನನ್ನು ಕೊಲೆ ಮಾಡಿದ್ದಾರೆ.ಹೀಗಾಗಿ ಹಾಡುಹಗಲೇ ಇವನನ್ನು ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಇನ್ನೂ ವಿಷಯ ತಿಳಿದ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು. ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅಂಗಡಿಯೊಂದರ ಮುಂದೆ ಚಾಕು ಇರಿದು ಪರಾರಿಯಾಗಿದ್ದಾರೆ.
ಹಳೆಯ ವೈಷಮ್ಯದಿಂದಲೇ ಈ ಒಂದು ಕೃತ್ಯ ಎಸಗಿರುವುದಾಗಿ ಶಂಕೆ ವ್ಯಕ್ತವಾಗಿದೆ.ಇನ್ನೂ ಈ ಒಂದು ವಿಷಯ ತಿಳಿದ ಶಹರ ಠಾಣೆ ಪೊಲೀಸರು ಅಧಿಕಾರಿಗಳಿಂದ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇದರೊಂದಿಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.