9,10 ನೇ ತರಗತಿಗಳಿಗೆ ಮಾತ್ರ ರಜೆ ಎಂದಿನಂತೆ ನಡೆಯಲಿವೆ 1 ರಿಂದ 8 ನೇ ಕ್ಲಾಸ್ ಗಳು ಹೊರಬಿತ್ತು ಇಲಾಖೆಯಿಂದ ಆದೇಶ…..

Suddi Sante Desk

ಬೆಂಗಳೂರು –

ದಿನಾಂಕ 9, 10 ಹಾಗೂ 11/2/2022 ರಂದು ಒಂದನೆಯ ತರಗತಿಯಿಂದ ರಿಂದ ಎಂಟನೆಯ ತರಗತಿಗಳು ಯಥಾ ವತ್ತಾಗಿ ನಡೆಯಲಿವೆ. 9 ಹಾಗೂ 10 ನೆಯ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ರಜೆ ನೀಡಲಾಗಿದ್ದು ಪರೀಕ್ಷಾ ಸಮಯವಾದ್ದರಿಂದ ಶಿಕ್ಷಕರು ಶಾಲೆಯಲ್ಲಿದ್ದು ಈ ಮಕ್ಕಳಿಗೆ ಕಡ್ಡಾಯವಾಗಿ ಆನ್ ಲೈನ್ ಮೂಲಕ ತರಗತಿಗಳನ್ನು ನಡೆಸಿ ಮಾರ್ಗದರ್ಶನ ಮಾಡುವುದು ಎಂದು ಇಲಾಖೆಯ ಅಧಿಕಾರಿಗಳು ಮಹತ್ವದ ಸೂಚನೆ ನೀಡಿದ್ದಾರೆ.

ದಿನಾಂಕ 9, 10 ಹಾಗೂ 11/2/2022 ರಂದು ನಡೆಯ ಬೇಕಿದ್ದ ದ್ವಿತೀಯ ಭಾಷೆ, ಗಣಿತ ಹಾಗೂ ತೃತೀಯ ಭಾಷೆಯ ಎಸ್.ಎಸ್.ಎಲ್.ಸಿ ಒಂದನೆಯ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಕ್ರಮವಾಗಿ ದಿನಾಂಕ 14, 15 ಹಾಗೂ 16/2/2022 – ಈ ದಿನಗಳಂದು ನಡೆಸುವುದು. ದಿನಾಂಕ 12/2/2022 ರಂದು ನಡೆಯಲಿರುವ ವಿಜ್ಞಾನ ವಿಷಯದ ಪರೀಕ್ಷೆಯು ಯಥಾಪ್ರಕಾರ ನಡೆಸಲು ತಿಳಿಸಿದೆ

ನಾಳೆ ದಿನಾಂಕ 9/2/2022 ಹಾಗೂ 10/2/2022 ಈ ಎರಡು ದಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಜಿಲ್ಲಾ ಮಟ್ಟದ ಸಭೆಯು ಈಗಾಗಲೇ ಸೂಚಿಸಿದಂತೆ ನಡೆಯ ಲಿದ್ದು, ಸದರ ದಿನಾಂಕಗಳಂದು ಸಂಬಂಧಿಸಿದ ತಾಲೂಕಿನ ಮುಖ್ಯೋಪಾಧ್ಯಾಯರು ನಿಗದಿತ ಸ್ಥಳದಲ್ಲಿ ಬೆಳಿಗ್ಗೆ ಸರಿಯಾಗಿ 10.00. ಗಂಟೆಗೆ ಹಾಜರಿರಲು ಸೂಚಿಸಿದ್ದು ಬಿಇಓ ಅವರಿಗೆ ಈ ಒಂದು ಕುರಿತು ಮಹತ್ವದ ಕಾರ್ಯ ನಿರ್ವಹಿಸಲು ಹೇಳಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.