ಮುಖ್ಯಶಿಕ್ಷಕ ರಿಂದ ಪೊಲೀಸರಿಗೆ ದೂರು – ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರಿಂದ ತನಿಖೆ ಶುರು…..

Suddi Sante Desk

ಉಡುಪಿ –

ಹೌದು ಉಡುಪಿಯ ಪುತ್ತೂರು ಗ್ರಾಮದ ಹನುಮಂತನ ಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಡ್ಡರ್ಸೆ ಬನ್ನಾಡಿ ಸರಕಾರಿ ಪ್ರೌಢಶಾಲೆ ಗಳಿಗೆ ಕಿಡಿಗೇಡಿ ಗಳು ಹಾನಿ ಎಸಗಿರುವ ಘಟನೆ ಇಂದು ನಡೆದಿದೆ. ಹನು ಮಂತ ನಗರದ ಶಾಲೆಯ ಕಟ್ಟಡದ ಹೆಂಚಿನ ಮಾಡಿಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಎಸೆದು ಸುಮಾರು 100 ಹಂಚುಗಳನ್ನು ಹಾನಿಗೊಳಿಸಿದ್ದಾರೆ.ಇದರಿಂದ ಸುಮಾರು 25,000ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸ ಲಾಗಿದೆ.ಈ ಬಗ್ಗೆ ಪ್ರಭಾರ ಮುಖ್ಯ ಶಿಕ್ಷಕಿ ರಮಣಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ವಡ್ಡರ್ಸೆ ಬನ್ನಾಡಿ ಸರಕಾರಿ ಪ್ರೌಢಶಾಲೆಗೆ ಅಕ್ರಮ ಪ್ರವೇಶ ಮಾಡಿದ ಕಿಡಿ ಗೇಡಿಗಳು ಶಾಲೆಯ ಕಿಟಕಿಗೆ ಅಳವಡಿಸಿದ 5 ಕಿಟಕಿಯ ಗ್ಲಾಸ್,ನೀರು ಪೂರೈಕೆಯ ಪೈಪ್ ಮತ್ತು ಶೌಚಾಲಯಕ್ಕೆ ಅಳವಡಿಸಿದ್ದ 5 ಕಿಟಕಿಯ ಗ್ಲಾಸ್,ಶಾಲೆಯ ರೂಫ್ ಮೇಲೆ ಅಳವಡಿಸಿದ ನೀರು ಸಂಗ್ರಹಣಾ ಟ್ಯಾಂಕನ್ನು ಒಡೆದು ಹಾಕಿದ್ದಾರೆ.ಇದರಿಂದ ಸುಮಾರು 50,000 ರೂ ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.ಈ ಬಗ್ಗೆ ಮುಖ್ಯ ಶಿಕ್ಷಕ ಆನಂದ ಶೆಟ್ಟಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.