ಮೊಟ್ಟೆ ಗಾಗಿ ಇಬ್ಬರು ಶಿಕ್ಷಕರ ಪೈಟ್ – ವೈರಲ್ ಆಗಿದೆ ಇಬ್ಬರು ಶಿಕ್ಷಕರ ನಡುವಿನ ಗುದ್ದಾಟ…..

Suddi Sante Desk

ಮುರ್ಜಾಪುರ –

ಮೊಟ್ಟೆ ಹಣಕ್ಕಾಗಿ ಶಿಕ್ಷಕರಿಬ್ಬರು ನಡು ರಸ್ತೆಯಲ್ಲಿ ಕೈ ಕೈ ಮೀಗಿಲಾಯಿಸಿಕೊಂಡಿರುವ ಘಟನೆ ಬೀದರ್ ನ ಮುರ್ಜಾಪುರ ದಲ್ಲಿ ನಡೆದಿದೆ.ಹೌದು ಸರಿ-ತಪ್ಪುಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ತಿದ್ದಿ ಬುದ್ದಿ ಹೇಳಬೇಕಾಗಿದ್ದ ಇಬ್ಬರು ಶಿಕ್ಷಕರು ಹೊಡೆದಾಡಿಕೊಂಡಿದ್ದಾರೆ‌.

ಹೌದು ಶಿಕ್ಷಕರೇ ಮೊಟ್ಟೆ ಹಣಕ್ಕಾಗಿ ಬಡಿದಾಡಿ ಕೊಂಡಿರುವ ಘಟನೆ ಬೀದರ್ ನಲ್ಲಿ ನಡೆದಿದೆ.ಬೀದರ್ ತಾಲೂಕಿನ ಮುರ್ಜಾಪುರ ಗ್ರಾಮದಲ್ಲಿ ಶಿಕ್ಷಕರಿಬ್ಬರು ಕೈ-ಕೈ ಮಿಲಾಯಿ ಸಿಕೊಂಡಿದ್ದಾರೆ.ಶಿಕ್ಷಕ ಶಾಂತಕುಮಾರ್ ಶಾಲಾ ಮಕ್ಕಳಿಗಾಗಿ ಮೊಟ್ಟೆ ತಂದಿದ್ದರು.ನಂತರ ಮೊಟ್ಟೆ ಹಣ ನೀಡುವಂತೆ ಮುಖ್ಯ ಗುರುಗಳ ಬಳಿ ಕೇಳಿದ್ದಾರೆ.ಈ ವೇಳೆ ಮುಖ್ಯ ಶಿಕ್ಷಕ ಮಡಯ್ಯಸ್ವಾಮಿ ಮತ್ತು ಶಾಂತಕುಮಾರ್ ನಡುವೆ ವಾಗ್ವಾದ ನಡೆದಿದ್ದು ಇಬ್ಬರೂ ಬಡಿದಾಡಿಕೊಂಡಿದ್ದಾರೆ. ಶಿಕ್ಷಕರ ಬೀದಿ ಕಾಳಗದ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಇನ್ನೂ ಇತ್ತ ಇಲಾಖೆಯ ಅಧಿಕಾರಿಗಳು ಈ ಒಂದು ಕುರಿತು ಮಾಹಿತಿ ಪಡೆದುಕೊಂಡಿದ್ದು ತನಿಖೆ ಯನ್ನು ಮಾಡತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.