ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಿದ್ದ ಮುಖ್ಯಶಿಕ್ಷಕ ಹೃದಯಾಘಾತದಿಂದ ನಿಧನ – ಕರ್ತವ್ಯಕ್ಕೆ ಹಾಜರಾಗಿ ಶಾಲಾ ಆವರಣದಲ್ಲಿ ಹೃದಯಾಘಾತ ಆಸ್ಪತ್ರೆಯಲ್ಲಿ ಸಾವು…..

Suddi Sante Desk

ಬಳ್ಳಾರಿ –

ಎಸ್ ಎಸ್ ಎಲ್ ಸಿ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಿ ನಂತರ ಮನೆಯತ್ತ ಹೊರಟಿದ್ದ ಮುಖ್ಯಶಿಕ್ಷಕ ರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಬಳ್ಳಾರಿ ಯಲ್ಲಿ ನಡೆದಿದೆ. ಹೌದು ಬಳ್ಳಾರಿಯ ರಾಜ್ಯೋತ್ಸವ ನಗರದ ಎಸ್.ಎಂ.ವಿ.ವಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾ ಗಿದ್ದು ಇಂದು ಬೆಳಗ್ಗೆ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಿದ್ದು ಎಕ್ಸಾಂ ಬಳಿಕ ಮಧ್ಯಾಹ್ನ 1.50 ಸುಮಾರಿಗೆ ಶಾಲೆಯ ಆವರಣದಲ್ಲಿಯೇ ಹೃಯಘಾತವಾಗಿದೆ. ಕರ್ತವ್ಯದಲ್ಲಿದ್ದ ಮುಖ್ಯ ಶಿಕ್ಷಕ ಹೃದಯಘಾತದಿಂದ ಮೃತಪಟ್ಟಿದ್ದಾರೆ ಬಸವೇಶ್ವರ ನಗರದ ಸಿ.ಎಸ್.ಮುಧೋಳ್ (59) ಮೃತ ಶಿಕ್ಷಕರಾಗಿದ್ದಾರೆ.

ಬಳ್ಳಾರಿಯ ರಾಜ್ಯೋತ್ಸವ ನಗರದ ಎಸ್.ಎಂ.ವಿ.ವಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ.ಬೆಳಗ್ಗೆ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಿದ್ದು ಎಕ್ಸಾಂ ಬಳಿಕ ಮಧ್ಯಾಹ್ನ 1.50 ಸುಮಾರಿಗೆ ಶಾಲೆಯ ಆವರಣದಲ್ಲಿಯೇ ಹೃಯಘಾತವಾಗಿದೆ.ಮೃತರಿಗೆ ಪತ್ನಿ,ಒಬ್ಬ ಪುತ್ರ,ಪುತ್ರಿ ಇದ್ದಾರೆ.ನಾಳೆ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.