ಜೈಲು ಸೇರಿದ ಸರ್ಕಾರಿ ಅಧಿಕಾರಿ 10 ಸಾವಿರ ರೂಪಾಯಿ ಗೆ ಲಂಚ ತೆಗೆದುಕೊಳ್ಳುವಾಗ ACB ಬಲೆಗೆ ಬಿದ್ದಿದ್ದ ಚೆನ್ನಕೇಶಪ್ಪ…..

Suddi Sante Desk

ಬೆಂಗಳೂರು –

ಎಸಿಬಿ ಬಲೆಗೆ ಬಿದ್ದಿದ್ದ BWSSB ಜೆಇ ಗೆ ಕೋರ್ಟ್ ನಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.ಹೌದು ಜೆಇ ಚೆನ್ನಕೇಶಪ್ಪ ಅವರಿಗೆ 23 ನೇ ಸಿಟಿ ಸಿವಿಲ್ ಕೋರ್ಟ್ ಶಿಕ್ಷೆ ವಿಧಿಸಿದೆ.2017 ರಲ್ಲಿ BWSSB ಜೆಇ ಡಿ.ಚೆನ್ನಕೇಶಪ್ಪ ಎಸಿಬಿ ಬಲೆಗೆ ಬಿದ್ದಿದ್ದರು. ಬೆಂಗಳೂರಿನ ನಾಗರಬಾವಿಯ ವಾಣಿಜ್ಯ ಕಟ್ಟಡಕ್ಕೆ ನೀರಿನ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು 30,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು 10 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು.

2017 ರಲ್ಲಿ ಎಸಿಬಿಯಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.ಚನ್ನಕೇಶಪ್ಪ ಅವರಿಗೆ 5 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ ಹೀಗಾಗಿ ಅಧಿಕಾರಿ ಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಜೈಲಿಗೆ ಅಟ್ಟಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.