ಧಾರವಾಡ –
ಕರೋನಾ ಮಹಾಮಾರಿಯನ್ನು ಕಟ್ಟಿಹಾಕಲು ರಾಜ್ಯ ದ ತುಂಬೆಲ್ಲಾ ಲಾಕ್ ಡೌನ್ ನ್ನು ಜಾರಿ ಮಾಡಲಾಗಿ ದೆ .ಇನ್ನೂ ಈ ಒಂದು ಸಮಯದಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿರುವ ಕರೋನಾ ವಾರಿಯ ರ್ಸ್ ಗೆ ಧಾರವಾಡದಲ್ಲಿ ಲಯನ್ಸ್ ಕ್ಲಬ್ ನ ಗ್ಯಾಲಕ್ಸಿ ಯ ಬಳದವರು ವಿಶೇಷವಾಗಿ ಸಹಾಯದ ಕಾರ್ಯ ವನ್ನು ಮಾಡತಾ ಇದ್ದಾರೆ.
ಹೌದು ಹಸಿದ ಹೊಟ್ಟೆಗಳಿಗೆ ಧಣಿದುಕೊಂಡ ಜೀವ ಗಳಿಗೆ ನೆರವಾಗುತ್ತಿದ್ದಾರೆ.ಸಂಘದ ಅಧ್ಯಕ್ಷೆ ಎಮ್
ಎ ಮಮ್ಮಿಗಟ್ಟಿ ಅವರ ನೇತ್ರತ್ವದಲ್ಲಿ ನಗರದ ತುಂ ಬೆಲ್ಲಾ ಪ್ರತಿದಿನ ಸಂಚರಿಸುತ್ತಾ ಅಲ್ಲಲ್ಲಿ ಕರ್ತವ್ಯ ಮಾಡುತ್ತಿರುವ ಕರೋನಾ ವಾರಿಯರ್ಸ್ ಗೆ ಚಹಾ ಚುರಮರಿ ಫಲಾವ್ ಸೇರದಂತೆ ಬೇರೆ ಬೇರೆ ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ.
ನಗರದಲ್ಲಿ ಎಲ್ಲೇಂದರದಲ್ಲಿ ಕರ್ತವ್ಯ ಮಾಡುತ್ತಿರುವ ಕರೋನಾ ವಾರಿಯರ್ಸ್ ಗೆ ಲಯನ್ಸ್ ಟೀಮ್ ನವ ರು ಕರ್ತವ್ಯ ಮಾಡುವ ಸ್ಥಳಕ್ಕೆ ಹೋಗಿ ಆಹಾರ ಪದಾರ್ಥಗಳನ್ನು ನೀಡಿ ನೆರವಾಗುತ್ತಿದ್ದಾರೆ.
ಇದರೊಂದಿಗೆ ಅವರೊಂದಿಗೆ ಈ ಮೂಲಕ ನಗರದ ಲಯನ್ಸ್ ಕ್ಲಬ್ ನವರು ಸಾಮಾಜಿಕ ಕಾರ್ಯವನ್ನು ಮಾಡುತ್ತಿದ್ದಾರೆ.
ಸಂಸ್ಥೆಯ ಅಧ್ಯಕ್ಷೆ ಡಾ ಎಮ್ ಎ ಮಮ್ಮಿಗಟ್ಟಿ, ಜ್ಯೋತಿ ಹಿರೇಮಠ, ಸ್ವರ್ಣಲತಾ, ಎಮ್ ಎಸ್ ಮುಳಮುತ್ತಲ ಸೇರಿದಂತೆ ಹಲವು ಸದಸ್ಯರು ಈ ಒಂದು ಕಾರ್ಯದಲ್ಲಿ ಪಾಲ್ಗೊಂಡು ಕರೋನಾ ವಾರಿ ಯರ್ಸ್ ಗೆ ನೆರವಾದರು.
ವರದಿ ಮಂಜುನಾಥ ಸರ್ವಿ ಪೊಟೊ ಕೃಪೆ ಭರತ್ ಹೂಗಾರ