ಬೆಳಗಾವಿ –
ಬೆಳಗಾವಿ ಲೋಕಸಭಾ ಉಪಚುನಾವಣೆಯ ಅಖಾ ಡದಲ್ಲಿ ದಿವಂಗತ ಸುರೇಶ ಅಂಗಡಿ ಪತ್ನಿ ಬಿಜೆಪಿಯ ಮಂಗಲಾ ಅಂಗಡಿ ಗೆಲುವಿನ ನಗೆ ಬೀರಿದ್ದಾರೆ. ಹೌದು ಇಂದು ನಡೆದ ಮತ ಏಣಿಕೆಯಲ್ಲಿ ಆರಂಭ ದಿಂದಲೂ ಕೊನೆಯವರೆಗೆ ಹಾವು ಏಣಿ ಆಟದಲ್ಲಿ ಕೊನೆಯ ಓವರ್ ನಲ್ಲಿ ಮಂಗಲಾ ಅಂಗಡಿ ಸಿಕ್ಸರ್ ಬಾರಿಸಿ ಗೆಲವನ್ನು ಸಾಧಿಸಿದ್ದಾರೆ.
ಹೌದು ಅಂತಿಮ ಸುತ್ತಿನ ಮತ ಎಣಿಕೆಯವರೆಗೂ ರೋಚಕತೆಯಿಂದ ಸಾಗಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿದ್ದ ಮಾಜಿ ಸಂಸದ ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಜಯ ಸಾಧಿಸಿದ್ದಾರೆ.ಮಂಗಳಾ ಅಂಗಡಿಯವರು 4048 ಮತಗಳ ಅಂತರದಿಂದ ಕಾಂಗ್ರೆಸ್ ನ ಸ್ಪರ್ಧಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ.
ಈ ಮೂಲಕ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಪಡೆದಿದ್ದಾರೆ.ಆರಂಭಿಕ ಸುತ್ತುಗಳಲ್ಲಿ ಮುನ್ನಡೆ ಸಾಧಿ ಸಿದ್ದ ಮಂಗಳಾ ಅಂಗಡಿ ನಂತರ ಹಿನ್ನಡೆ ಅನುಭವಿ ಸಿದ್ದರು.ಆದರೆ ನಂತರದ ಸುಮಾರು 35 ಸುತ್ತುಗ ಳಲ್ಲಿ ಸತೀಶ್ ಜಾರಕಿಹೊಳಿ ಅವರು ಸತತವಾಗಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ 83 ನೇ ಸುತ್ತಿ ನ ನಂತರ ಮತ ಅಂತರ ಕಡಿಮೆ ಮಾಡಿಕೊಂಡ ಬಂದ ಮಂಗಳಾ ಅಂತಿಮ ಗೆಲುವಿನ ನಗೆ ಬೀರಿ ನಿಟ್ಟುಸಿರು ಬಿಟ್ಟಿದ್ದಾರೆ.