ಶಾಲಾ ಸಮಯದಲ್ಲಿ ಬದಲಾವಣೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ನಡೆಸಲು ಸೂಚನೆ ನೀಡಿದ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ…..

Suddi Sante Desk

ನವದೆಹಲಿ –

ಪ್ರತಿ ವರ್ಷಕ್ಕಿಂದ ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾ ಗಿದ್ದು ಹೀಗಾಗಿ ಹೆಚ್ಚಾಗಿರುವ ಈ ಒಂದು ತಾಪಮಾನದಿಂದ ಈ ವರ್ಷ ಶಾಲಾ ಅವಧಿಯನ್ನು ಕಡಿಮೆ ಮಾಡಿದ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟ ಮಾಡಿದೆ ಹೌದು ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಬಿಸಿಲಿನಾ ತಾಪಾಮಾನದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಬಿಸಿಲಿನ ಅಡ್ಡ ಪರಿಣಾಮಗಳಿಂದ ಕಾಪಾಡಲು ಶಾಲಾ ಸಮಯದಲ್ಲಿ ಬದಲಾವಣೆ, ಸಮವಸ್ತ್ರ ಸಡಿಲಿಕೆ ಸೇರಿ ದಂತೆ ಕೆಲವು ಮಾರ್ಪಾಡು ಮಾಡಿಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವಾಲಯವು ರಾಜ್ಯಗಳಿಗೆ ಮಹತ್ವದ ಸಲಹೆ ನೀಡಿದೆ.

ಬೇಸಿಗೆ ಕಾರಣ ಶಾಲಾ ಸಮವಸ್ತ್ರ ಕಡ್ಡಾಯ ಮಾಡದಂತೆ ಕೇಂದ್ರ ಶಿಕ್ಷಣ ಸಚಿವಾಲಯವು ಹೊಸ ಮಾರ್ಗಸೂಚಿಗ ಳನ್ನು ಬಿಡುಗಡೆ ಮಾಡಿದೆ.ದೇಶದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಪ್ರಮಾಣ 45 ಡಿ.ಸೆ.ಗಿಂತ ಹೆಚ್ಚಿದ್ದು ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಕೇಂದ್ರ ಶಿಕ್ಷಣ ಸಚಿವಾಲಯದ ಮಾರ್ಗಸೂಚಿಗಳನ್ನು ನೀಡಿದ್ದು ಬೇಸಿಗೆ ಕಾರಣಕ್ಕೆ ಶಾಲೆಗಳನ್ನು ಮುಚ್ಚಬಾರದು ಶಾಲಾ ಸಮಯ ಬದಲಾವಣೆ ಮಾಡಿ ಬೆಳಗ್ಗೆ 7 ಗಂಟೆಯಿಂದ ಶಾಲೆ ಆರಂ ಭಿಸಿ ಮಧ್ಯಾಹ್ನದ ಒಳಗೆ ಅಂದರೆ 1 ಗಂಟೆಯ ಒಳಗಾಗಿ ಮುಗಿಸುವಂತೆ ಸಲಹೆ ನೀಡಿದೆ ಸಮವಸ್ತ್ರ ಕಡ್ಡಾಯ ಬೇಡ ಅನುಕೂಲ ಆಗುವ ಬಟ್ಟೆ ಧರಿಸಲು ಅವಕಾಶ ನೀಡಬೇಕು ಚರ್ಮದ ಶೂ ಬದಲು ಕ್ಯಾನ್ವಾಸ್ ಶೂ ಬಳಕೆಗೆ ಅವಕಾಶ ಕೊಡಬೇಕು.ಹೆಚ್ಚು ನೀರು ಕುಡಿಯುವಂತೆ ಮಕ್ಕಳಿಗೆ ಶಿಕ್ಷಕರು ಅರಿವು ಮೂಡಿಸಬೇಕು ಎಂದು ಹೇಳಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.