ಸೇವಾನಿರತ ಶಿಕ್ಷಕರಿಗೆ TET ಕಡ್ಡಾಯಕ್ಕೆ ವಿರೋಧ – ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿ…..

Suddi Sante Desk
ಸೇವಾನಿರತ ಶಿಕ್ಷಕರಿಗೆ TET ಕಡ್ಡಾಯಕ್ಕೆ ವಿರೋಧ – ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿ…..

ಹಾವೇರಿ

ಸೇವಾನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಬೇಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿ ಹೌದು ಸೇವಾನಿರತ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸಿ, ಶಿಕ್ಷಕರಿಗೆ ಸೇವಾಭದ್ರತೆ ಒದಗಿಸುವಂತೆ ಒತ್ತಾಯಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಹಾಗೂ ಸಂಸದರನ್ನು ಭೇಟಿ ಮಾಡಿದ ನಿಯೋಗ, ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವ ಸುಪ್ರೀಂಕೋರ್ಟ್ ಆದೇಶವನ್ನು ಸಂಸತ್ತಿನಲ್ಲಿ ಕಾಯ್ದೆ ಮೂಲಕ ತಿದ್ದುಪಡಿ ಮಾಡಿ ರದ್ದುಗೊಳಿಸಬೇಕು.

ಸಂಸತ್ತಿನಲ್ಲಿ ಈ ಕುರಿತು ಚರ್ಚಿಸುವಂತೆ ಹಕ್ಕೊತ್ತಾಯವನ್ನು ಮಂಡಿಸಿದರು. ಸಂಘದ ರಾಜ್ಯ ಸಹ ಕಾರ್ಯದರ್ಶಿ ಪ್ರಮೀಳಾ ಕಾಮನಹಳ್ಳಿ, ಜಿಲ್ಲಾಧ್ಯಕ್ಷ ಜಗದೀಶ ಜೋಗಿಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಡೆಪ್ಪ ಕಂತಿ, ಮಹಿಳಾ ಉಪಾಧ್ಯಕ್ಷೆ ಅನ್ನಪೂರ್ಣ ಬಣಕಾರ, ಜಿಲ್ಲಾ ಸಹಕಾರ್ಯದರ್ಶಿ ಸುಮಾ ಆರ್., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಯೋಗಿ ಆಲದಕಟ್ಟಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸುನೀತಾ ಪೂಜಾರ,

ಸಂಘಟನೆಯ ಪದಾಕಾರಿಗಳಾದ ಸತೀಶ ಶಂಕಿನದಾಸರ, ಮೌನೇಶ ಕರೆಮ್ಮನವರ, ಸಿ.ಡಿ. ಕರಿಯಣ್ಣನವರ, ಬಸವರಾಜ ಧೂಳೆಹೊಳಿ, ನಾಗರಾಜ ದೇವಾಂಗದ, ಪಿ.ಎಸ್.ಸಾಲಿ, ರಮೇಶ್ ಪೂಜಾರ, ಉಮೇಶ್ ಸವಣೂರು, ಮಕಬೂಲ್ ಲಿಂಗದಹಳ್ಳಿ, ಚಂದ್ರು ಸಣ್ಣಗೌಡ, ಎಸ್.ಎಂ. ಕರಿಗಾರ, ರಮೇಶ ನಿಗದಿ, ಎಸ್.ವಿ.ಹಿರೇಮಠ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಸಂಘಗಳ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತ ರಿದ್ದರು.

 

ಸುದ್ದಿ ಸಂತೆ ನ್ಯೂಸ್ ಹಾವೇರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.