ರಾಜ್ಯಸಭೆ ಗೆ BJP ಯಿಂದ ನಿರ್ಮಲಾ ಸೀತಾರಾಮನ್ ನವರಸ ನಾಯಕ ಜಗೇಶ್ ಇಬ್ಬರ ಹೆಸರನ್ನು ಘೋಷಣೆ…..

Suddi Sante Desk

ಬೆಂಗಳೂರು –

ರಾಜ್ಯಸಭಾ ಚುನಾವಣೆಗೆ ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಈ ಬಾರಿ ಕನ್ನಡ ಚಿತ್ರರಂಗಕ್ಕೂ ಒಂದು ಸಂತಸ ಸಂಗತಿಯನ್ನು ನೀಡಿದೆ. ಬಿಜೆಪಿ ಹೊರಡಿಸಿರುವ ಪಟ್ಟಿಯಲ್ಲಿ ಒಂದು ನಿರೀಕ್ಷಿತ ಎನಿಸಿಕೊಂಡಿದ್ದರೆ ಮತ್ತೊಂದು ರೀತಿಯಲ್ಲಿ ಅಚ್ಚರಿ ಎಂಬಂತೆಯೂ ಆಗಿದೆ.ಏಕೆಂದರೆ ಬಹುತೇಕರ ನಿರೀಕ್ಷೆ ಯಂತೆ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಹೆಸರು ಒಂದಾಗಿದ್ದರೆ ಇನ್ನು ಅಚ್ಚರಿ ಎಂಬ ರೀತಿಯಲ್ಲಿ ನಟ ನವರಸ ನಾಯಕ ಜಗ್ಗೇಶ್ ಹೆಸರನ್ನೂ ಸೂಚಿಸಲಾಗಿದೆ.

ಇನ್ನು ನಿರ್ಮಲಾ ಸೀತಾರಾಮನ್ ಆಯ್ಕೆಯನ್ನು ಊಹಿಸಿದ್ದ ಕಾಂಗ್ರೆಸ್,ಕರ್ನಾಟಕಕ್ಕೆ ನಿರ್ಮಲಾ ಸೀತಾ ರಾಮನ್ ಕಾಣಿಕೆ ಏನು ಎಂದು ಈಗಾಗಲೇ ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದು ವೈರಲ್ ಆಗಿತ್ತು.ಆದರೆ ಅದ್ಯಾವು ದಕ್ಕೂ ತಲೆಯನ್ನು ಕೆಡಿಸಿಕೊಳ್ಳದೇ ಬಿಜೆಪಿ ನಿರ್ಮಲಾ ಸೀತಾರಾಮನ್ ಅವರನ್ನು ಅಭ್ಯರ್ಥಿಗಳಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಿದೆ.ಸದ್ಯಕ್ಕೆ ಇಬ್ಬರ ಹೆಸರು ಮಾತ್ರ ಘೋಷಣೆ ಮಾಡಿರುವ ಬಿಜೆಪಿ,ಮೂರನೇ ಅಭ್ಯರ್ಥಿ ಯನ್ನು ಕಣಕ್ಕೆ ಇಳಿಸುವುದು ಬಹುತೇಕ ಅನುಮಾನ ಎನ್ನಲಾಗಿದ್ದು ಏನೇನಾಗುತ್ತದೆ ಎಂಬೊಂದನ್ನು ಕಾದು ನೋಡಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.