ಶಾಲೆಗೆ ಹೋಗೊದು ಎಂದರೆ ಶಿಕ್ಷಕರಿಗೆ ಮಕ್ಕಳಿಗೆ ದೊಡ್ಡ ತಲೆನೋವು – ಶಾಲೆಯ ಸುತ್ತಮುತ್ತಲು ಹೆಚ್ಚಾಗಿದೆ ಮಲ ಮೂತ್ರ ವಿಸರ್ಜನೆ…..ಕೆಟ್ಟ ವಾಸನೆ ಯಿಂದ ಪರದಾಟ…..

Suddi Sante Desk

ಸವದತ್ತಿ –

ಇಲ್ಲೊಂದು ಶಾಲೆಯ ಕಾಂಪೌಂಡ್ ಸುತ್ತಮೂತಲು ಸಾರ್ವಜನಿಕರು ಮಲಮೂತ್ರ ವಿಸರ್ಜೆನೆ ಮಾಡುತ್ತಿರುವು ದರಿಂದ ರ್ದುನಾಥ ಸೇವಿಸುತ್ತಲೆ ಪಾಠ ಕೇಳಬೇಕಾದ ಅನಿವಾರ್ಯತೆ ಬಂದು ಒದೆಗಿದೆ,ಎಷ್ಟು ಬಾರಿ ಗ್ರಾಮ ಪಂಚಾಯತಿಗೆ ಮನವಿ ಮಾದಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಶಾಲೆಯತ್ತ ತಿರುಗಿ ನೋಡುತ್ತಿಲ್ಲ ಗ್ರಾಮ ಪಂಚಾಯತಿಯವರು‌.ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಸುತ್ತ ಮುತ್ತಲಿನ ಚಿತ್ರಣ ವಿದು ಸ್ಥಳೀಯ ಸಾರ್ವ ಜನಿಕರು ಶಾಲೆ ಕಾಂಪೌಂಡ ಸುತ್ತಮೂ ತಲು ದಿನ ನಿತ್ಯ ಮಲಮೂತ್ರ ವಿಸರ್ಜಿಸುತ್ತಿರುವುದರಿಂದ ಕಾಂಪೌಂಡಗೆ ಹೊಂದಿಕೊಂಡಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರ್ದುನಾಥ ವಾಸನೆಯ ವಾತಾವರಣ ಹರಡಿದೆ

ಆ ವಾತಾವರಣದಲ್ಲಿಯೆ ಮಕ್ಕಳು ಶಿಕ್ಷಣ ಕಲಿಯಬೇಕಾದ ಸ್ಥಿತಿ ಒದಗಿದೆ ಇದರಿಂದಾಗಿ ಮಕ್ಕಳಲ್ಲಿ ರೋಗದ ಭೀತಿಯು ಕಾಡುತ್ತಿದ್ದು ಮುಂದೊಂದು ದಿನ ಮಕ್ಕಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ.ಈ ಶಾಲೆಯಲ್ಲಿ ಒಟ್ಟು 255 ವಿಧ್ಯಾ ರ್ಥಿಗಳಿದ್ದು ಪ್ರತಿ ದಿನ ಮೂಗು ಮುಚ್ಚಿಕೊಂಡು ಶಿಕ್ಷಣ ಕಲೆಯಬೇಕಾದ ಸ್ಥಿತಿ ಮಕ್ಕಳಿಗೆ ಹಾಗೂ ಪಾಠ ಹೇಳ ಬೇಕಾದ ಶಿಕ್ಷಕರಿಗೂ ಪರಿಸ್ಥಿತಿ ಎದುರಾಗಿದೆ.ಇದರಿಂದ ಪಾಠಗಳನ್ನು ಕಲಿಯಲು ಬರುವ ಮಕ್ಕಳ ಸಂಖ್ಯೆಯುಲ್ಲಿ ಇಳಿಕೆ ಕಂಡುಬರುತ್ತಿದೆ.

ಶಾಲೆಯ ಕಾಂಪೌಂಡಗೆ ಹೊಂದಿಕೊಂಡು ಸಾರ್ವಜನಿಕರು ನಿತ್ಯ ಬರ್ಹಿದಸೆಗೆ ಹೋಗುತ್ತಿರುವುದರಿಂದ ಕಾಂಪೌಂಡಗೆ ಹೊಂದಿಕೊಂಡಿರುವ ಕಿಟಕಿಗಳ ಮೂಲಕ ದುರ್ನಾಥ ವಾಸನೆ ಕೊಠಡಿ ಒಳಗೆ ಹರಡುತ್ತಿದೆ, ಶಿಕ್ಷಕರ ಶಿಕ್ಷಣಕ್ಕಿಂತ ದುರ್ವಾಸನೆಯ ಶಿಕ್ಷೆ ಹೆಚ್ಚಾಗಿದ್ದು ಕಿಟಕಿ ತೆರೆಯದ ಪರಿಸ್ಥಿತಿ ಉಂಟಾಗಿದೆ.ಇದರಿಂದ ಕೊಠಡಿಯೊಳಗೆ ಸರಿಯಾದ ಬೆಳಕು ಗಾಳಿಯಿಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಉಸಿರುಗಟ್ಟಿದ ವಾತಾವರಣದಲ್ಲಿ ಶಿಕ್ಷಣ ಪಡೆಯಬೇಕಾದ ಸ್ಥಿತಿ ಬಂದಿದೆ.

ಸ್ವಚ್ಛ ಭಾರತ ಹಾಗೂ ಬಯಲು ಬರ್ಹಿದಸೆ ಮುಕ್ತ ಮಾಡುವ ಉದ್ದೇಶದಿಂದ ಸ್ವಚ್ಛತೆಯತ್ತ ಒಂದು ಹೆಜ್ಜೆ ಎನ್ನುವ ಸ್ಲೋಗನ್ ನೊಂದಿಗೆ 2014 ರಲ್ಲಿಯೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದು ಅದಕ್ಕಾಗಿ ಸರ್ಕಾರವು ಸಹ ಪ್ರೋತ್ಸಾಹ ಧನ ನೀಡಿ ಸ್ವಚ್ಛತೆಯ ಕಡೆಗೆ ಆದ್ಯತೆ ನೀಡಿದ್ದರು ಸಹ ಹಂಚಿನಾಳ ಗ್ರಾಮದ ಜನರಿಗೆ ಶೌಚಾಲಯದ ಮಹತ್ವ ಕುರಿತು ಜಾಗೃತಿ ಮೂಡಿಸದೆ ಇರುವುದನ್ನು ನೋಡಿದರೆ ಗ್ರಾ.ಪಂಚಾಯತಿ ಕಾಳಜಿ ಎಷ್ಠರಮಟ್ಟಿಗೆ ಇದೆ ಎಂಬುದು ಕಾಣುತ್ತದೆ.ಸ್ಥಳೀಯ ಸರಕಾರಿ ಶಾಲೆಯ ಮಕ್ಕಳಿಗೆ ಕಲಿ ಯಲು ಶುದ್ಧ ವಾತಾವರಣ ನಿರ್ಮಿಸದೆ ಇರುವುದು ಹಾಗೂ ಗ್ರಾಮವನ್ನು ಬಯಲು ಬರ್ಹಿದಸೆ ಮುಕ್ತ ಮಾಡು ವಲ್ಲಿ ಶ್ರಮ ವಹಿಸದೆ ಇರುವುದು ಸ್ಥಳೀಯ ಪಂಚಾಯತಿ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಶಾಲಿಗೆ ಬಂದ್ರ ದುರ್ವಾಸನೆ ಹೊಡಿತೆತಿ ಹೌದು ಮೂಗು ಮುಚ್ಚಿಕೊಂಡ ಪಾಠ ಕೇಳಬೇಕಾದ ಸ್ಥಿತಿ ಕಾಂಪೌಂಡಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಗಲಿಜು ಇರುವುದರಿಂದ ಆ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ಬರಲಿಕ್ಕೆ ರೋಗ ಗಳ ಭಯ ಆಗುತ್ತಿದೆ ಆದಷ್ಟು ಬೇಗಣೆ ಸರಿಪಡಿಸಿ ಕಲಿ ಯಲಿಕ್ಕೆ ಒಳ್ಳಯ ವಾತಾವರಣ ನಿರ್ಮಿಸಿ ಕೊಡ್ರಿ ಎಂಬ ಆಗ್ರಹ ಎಲ್ಲರಿಂದ ಕೇಳಿ ಬರುತ್ತಿದೆ

ಈ ಶಾಲಿ ಕಾಂಪೌಂಡ ಗೆ ಸಾರ್ವಜನಿಕರು ಬರ್ಹಿದಸೆ ಹೋಗುತ್ತಿರುವುದರಿಂದ ಶಾಲೆಯಲ್ಲಿ ಹೊಲಸು ವಾಸನೆ ಬರ್ತೆತಿ ಆಟ-ಪಾಠವನ್ನು ಮೂಗು ಮುಚ್ಚಿಕೊಂಡು ಕಲಿಬೇ ಕಾಗಿದೆ.ಕಿಟಕಿಯಿಂದ ದುರ್ವಾಸನೆ ನಾಥ ಶಾಲೆಯ ಒಳಗೆ ಬರುತ್ತಿರುವುದರಿಂದ ಕಿಟಕಿ ತೆಗೆಯದ ಸ್ಥಿತಿ ನಿರ್ಮಾಣ ವಾಗಿದ್ದು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸಬೇ ಕಾದ ಅನಿರ್ವಾತೆ ಉಂಟಾಗಿದೆ ಒಟ್ಟರೆಯಾಗಿ ಈ ಅವ್ಯ ವಸ್ಥೆಯಿಂದ ಶಾಲೆಯಲ್ಲಿ ಕೆಲಸ ನಿರ್ವಹಿಸಲು ಕಷ್ಟ ಆಗುತ್ತಿದೆ.

ಶಾಲೆ ಕಾಂಪೌಂಡ್ ಗೆ ಸಾರ್ವಜನಿಕರು ಬಯಲು ಬರ್ಹಿ ದಸೆ ಹೋಗದಂತೆ ಹಿಂದೊಮ್ಮೆ ಕ್ರಮ ಜರುಗಿಸಿದ್ದೇವೆ ಆದರೂ ಸಹ ಸಾರ್ವಜನಿಕರು ಸಹಕರಿಸದೆ ಹಳೆ ಚಾಳಿ ಯನ್ನು ಮುಂದುವರಿಸಿದ್ದಾರೆ.ಒಟ್ಟಿನಲ್ಲಿ ಇನ್ನಾದರು ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಇಲ್ಲಿನ ಅವ್ಯವಸ್ಥೆ ಸರಿಪಡಿಸಿ ಮಕ್ಕಳಿಗೆ ಶುದ್ಧ ವಾತಾವರಣ ನಿರ್ಮಿಸಿ ಶಾಲೆಗೆ ಹಸಿರಿನ ಗರಿಯನ್ನಾಗಿ ಮಾಡ್ತಾರಾ ಇಲ್ಲ ಎಂದು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.