ರಾಜ್ಯದ ನೂತನ ಲೋಕಾಯುಕ್ತ ರಾಗಿ ಭೀಮನಗೌಡ ಪಾಟೀಲ್ ನೇಮಕ – ನೇಮಕ ಮಾಡಿ ಆದೇಶ ಹೊರಡಿಸಿತು ರಾಜ್ಯ ಸರ್ಕಾರ…..

Suddi Sante Desk

ಬೆಂಗಳೂರು

ರಾಜ್ಯ ಸರ್ಕಾರ ಕೊನೆಗೂ ಲೋಕಾಯುಕ್ತರನ್ನು ನೇಮಕ ಮಾಡಿದ್ದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಲಿ ಉಪ ಲೋಕಾಯುಕ್ತ ಭೀಮನಗೌಡ ಸಂಗನಗೌಡ ಪಾಟೀಲ್‌ ಅವರು ನೂತನ ಲೋಕಾಯುಕ್ತರಾಗಿ ನೇಮಕ ಗೊಂಡಿದ್ದಾರೆ.ಬಿಎಸ್ ಪಾಟೀಲ್‌ ಅವರನ್ನು ಲೋಕಾಯು ಕ್ತರನ್ನಾಗಿ ನೇಮಕ ಮಾಡುವಂತೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರು ಮಾಡಿದ್ದ ಶಿಫಾರಸ್ಸು ಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಅಂಕಿತ ಹಾಕಿದ್ದಾರೆ.

ಬಿಎಸ್ ಪಾಟೀಲ್‌ ಅವರು ನಾಳೆ ಬೆಳಗ್ಗೆ ರಾಜಭವನದಲ್ಲಿ ನೂತನ ಲೋಕಾಯುಕ್ತರಾಗಿ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು 2022ರ ಜನವರಿ 27ರಂದು ನಿವೃತ್ತರಾಗಿದ್ದರು.ಅಂದಿನಿಂದ ಈ ಹುದ್ದೆ ಖಾಲಿ ಇತ್ತು.ಈ ಹುದ್ದೆಗೆ ಈಗ ಬಿ.ಎಸ್‌. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.ಬಿಎಸ್ ಪಾಟೀಲ್ ಅವರು 2019ರ ನವೆಂಬರ್‌ನಿಂದ ಉಪ ಲೋಕಾಯುಕ್ತ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರ ಜೊತೆ ಸಮಾಲೋ ಚಿಸಿದ ಬಳಿಕ ಬಿ.ಎಸ್‌. ಪಾಟೀಲ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿದ್ದರು.ಅದರಂತೆ ರಾಜ್ಯಪಾಲರು ನೇಮಕಾತಿ ಆದೇಶ ಹೊರಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.