ರಾಷ್ಟ್ರೀಯ ಹೆದ್ದಾರಿ ಯಲ್ಲಿ ಹೆಚ್ಚುತ್ತಿವೆ ದರೋಡೆ ಪ್ರಕರಣಗಳು ಭರಮಸಾಗರ ಪೊಲೀಸರ ಕಣ್ಗಾವಲು…..

Suddi Sante Desk

ಚಿತ್ರದುರ್ಗ

ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದರೋಡೆ ಪ್ರಕರಣ ಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಭಯಭೀತರಾಗಿ ದ್ದಾರೆ.ಜಿಲ್ಲೆಯಲ್ಲಿ ಹೆಚ್ಚಿದ ದರೋಡೆ ಪ್ರಕರಣಗಳಿಂದ ಹಾಗೆ ದರೋಡೆ ನಿಯಂತ್ರಣಕ್ಕೆ ಪೊಲೀಸ್ ಕ್ರಮವನ್ನು ಕೈಗೊಂಡ ಹಿ‌‌ನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆಟ್ರೋಲಿಂಗ್ ಗಸ್ತು ಹೆಚ್ಚಿಸಿದ್ದಾರೆ ಎಸ್ಪಿ ಪರಶುರಾಮ ಅವರು.

ಕಳೆದ ಹದಿನೈದು ದಿನಗಳಲ್ಲಿ 6 ದರೋಡೆ ಪ್ರಕರಣಗಳು ದಾಖಲಾಗಿವೆ.ಭರಮಸಾಗರ ಬಳಿ ಲಕ್ಷಾಂತರ ಮೌಲ್ಯದ ವಸ್ತುಗಳ ದರೋಡೆ ನಡೆದಿದೆ.ಲಾರಿ ಚಾಲಕ ಮತ್ತು ಕ್ಲೀನರ್ನ ಕೈಕಾಲು ಕಟ್ಟಿ 64 ಲಕ್ಷ ರೂ.ಮೌಲ್ಯದ ಮೊಬೈಲ್, ಲ್ಯಾಪ್ ಟಾಪ್,ವೆಬ್ ಕ್ಯಾಂ ಸೇರಿ ಹಲವು ಇಲೆಕ್ಟ್ರಾನಿಕ್ ವಸ್ತುಗಳನ್ನು ದೋಚಿದ್ದಾರೆ.ಕಳೆದ 6 ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ತಿಂಗಳು ಕೂಡಾ ಮತ್ತೊಂದು ಖದೀಮರ ಗ್ಯಾಂಗ್ ಗುಟ್ಕಾ ಲಾರಿ ಹೈಜಾಕ್ ಮಾಡಿ ದರೋಡೆ ನಡೆಸಿತ್ತು.19.77 ಲಕ್ಷ ಮೌಲ್ಯದ ಗುಟ್ಕಾ ಎಗರಿಸಿದ್ದ 4 ಮಂದಿಯ ಗ್ಯಾಂಗ್ ಅನ್ನು ಭರಮಸಾಗರ ಪೊಲೀಸರು ಹೆಡೆಮುರಿ ಕಟ್ಟಿದ್ದರು. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕಳೆದೊಂದು ತಿಂಗ ಳಲ್ಲಿ 2 ದರೋಡೆ ಪ್ರಕರಣ ದಾಖಲಾಗಿವೆ.ದೊಡ್ಡಸಿದ್ದವ್ವ ನಹಳ್ಳಿ ಬಳಿ ಲಾರಿ ಚಾಲಕನಿಗೆ ಚಾಕು ತೋರಿಸಿ ಮೊಬೈಲ್ ಹಣ ಕಿತ್ತುಕೊಂಡಿದ್ದರು.ಮಲ್ಲಾಪುರ ಬಳಿ ಕಾರಿನಲ್ಲಿದ್ದ ಇಬ್ಬರು ಪ್ರೇಮಿಗಳಿಗೆ ಚಾಕು,ಲಾಂಗ್ ತೋರಿಸಿ ಲ್ಯಾಪ್ಟಾಪ್ 2 ಮೊಬೈಲ್, ಹಣ ಎಗರಿಸಿದ್ದರು.ಈ ಎರಡು ಗ್ಯಾಂಗನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸದೆಬಡಿದಿದ್ದಾರೆ

ಇನ್ನೂ ಕ್ಯಾದಿಗೆರೆ ಬಳಿ ದರೋಡೆಗೆ ಹೊಂಚು ಹಾಕಿದ್ದ ಮತ್ತೊಂದು ಗ್ಯಾಂಗ್ ನ್ನು ಸಹ ಪೊಲಿಸರು ಅರೆಸ್ಟ್ ಮಾಡಿದ್ದಾರೆ.ದರೋಡೆ ನಿಯಂತ್ರಣಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದ್ದು ಹೈವೇಯಲ್ಲಿ ಪೆಟ್ರೋಲಿಂಗ್ ಗಸ್ತು ಹೆಚ್ಚಿಸಿ ಕ್ರಮ ಕೈಗೊಳ್ಳಲಾಗಿದೆ.

ಅರುಣಾ ಜೊತೆಗೆ ಚಕ್ರವರ್ತಿ ಹಿರಿಯ ವರದಿಗಾರರು ಸುದ್ದಿ ಸಂತೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.