ಶಾಲೆಗೆ ಬೀಗ ಹಾಕಿದ ಗ್ರಾಮಸ್ಥರು ಕಾರಣ ಕೇಳಿದರೆ ಶಾಕ್ ಆಗುತ್ತೆ…..

Suddi Sante Desk

ತುಮಕೂರು –

ಹೌದು ಶಿಕ್ಷಕಿಯರ ನಡುವಿನ ಜಳಗಕ್ಕೆ ಬೇಸತ್ತು ಗ್ರಾಮಸ್ಥರೇ ಶಾಲೆಗೆ ಬೀಗ ಜಡಿದಿರುವ ಘಟನೆ ತುಮಕೂರು ತಾಲೂಕಿನ ಚಿಕ್ಕಸಾರಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಸಹಶಿಕ್ಷಕಿಯರ ಜಗಳ ನೋಡಲಾರದೇ ಚಿಕ್ಕಸಾರಂಗಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದಿದ್ದಾರೆ.ಈ ಶಾಲೆಯಲ್ಲಿ ಶಿಕ್ಷಕಿಯರಾಗಿರುವ ಗಂಗ ಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ನಡುವೆ ಸಣ್ಣ ಸಣ್ಣ ವಿಚಾ ರಕ್ಕೂ ಜಗಳವಾಗುತ್ತಿದೆಯಂತೆ.ಮಕ್ಕಳಿಗೆ ಪಾಠ ಮಾಡದೇ ಸದಾ ಪರಸ್ಪರ ಜಗಳವಾಡುತ್ತಿದ್ದರಂತೆ ಎಂದು ಗ್ರಾಮಸ್ಥರು ಆರೋಪಗಳನ್ನು ಮಾಡಿದ್ದಾರೆ ಹೀಗಾಗಿ ಸಧ್ಯ ಶಾಲೆಗೆ ಬೀಗ ಹಾಕಿದ್ದಾರೆ.

ಇದರಿಂದ ಬೇಸತ್ತಿರುವ ಗ್ರಾಮಸ್ಥರು ಶಾಲೆಗೆ ಈಗ ಬೀಗ ಜಡಿದಿದ್ದಾರೆ.ವೈಯಕ್ತಿಕ ವಿಚಾರಗಳು ಸೇರಿದಂತೆ ಶಾಲೆಗೆ ತಡವಾಗಿ ಬರುವ ವಿಚಾರಕ್ಕೆ ಜಗಳವಾಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ‌.

ಸದ್ಯ ಶಾಲೆಗೆ ಬೀಗ ಜಡಿದಿರುವುದರಿಂದ ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಇದ್ದು ಕಲಿಯುತ್ತಿದ್ದು ಇತ್ತ ಈ ಒಂದು ಸುದ್ದಿ ತಿಳಿದು ಸ್ಥಳಕ್ಕೆ ತುಮಕೂರು ಬಿಇಓ ಹನುಮನಾ ಯಕ್ ಭೇಟಿ ನೀಡಿ ಪರಿಶೀಲನೆ ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.