ಹುಬ್ಬಳ್ಳಿ –
ಪಾಲಿಕೆಯ ವಾಹನ ಮತ್ತು KSRTC ಬಸ್ ನ್ನು ತಡೆದು ಅದರಲ್ಲಿ ಹೊರಟಿದ್ದ ಸಿಬ್ಬಂದಿ ಗಳಿಗೆ ದಂಡ ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಚನ್ನಮ್ಮ ವೃತ್ತದಲ್ಲಿ ಪೊಲೀಸರು ಎರಡು ವಾಹನ ಗಳನ್ನು ತಡೆದು ಅದರಲ್ಲಿ ಹೊರಟಿದ್ದ ಸಿಬ್ಬಂದಿ ಗಳಿಗೆ ದಂಡವನ್ನು ಹಾಕಿದ್ದಾರೆ

ಹೌದು ಸಾರಿಗೆ ಸಿಬ್ಬಂದಿ ಪಾಲಿಕೆ ಸಿಬ್ಬಂದಿಯಿಂದಲೇ ನಿಯಮ ಉಲ್ಲಂಘನೆ ಹಿನ್ನಲೆಯಲ್ಲಿ ಇದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳದ ಪೊಲೀಸರು ಎರಡು ವಾಹನಗಳಲ್ಲಿ ಮಾಸ್ಕ್ ಇಲ್ಲದೇ ಸಾಮಾಜಿಕ ಅಂತರವಿಲ್ಲದೇ ತರೆಳುತ್ತಿದ್ದವರಿಗೆ ಬಿಸಿ ಮುಟ್ಟಿಸಿ ದ್ದಾರೆ.

ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಮಾಸ್ಕ್ ಇಲ್ಲದೇ ಸಿಬ್ಬಂದಿಗಳು ಪ್ರಯಾಣ ಮಾಡುತ್ತಿದ್ದರು ಇದನ್ನು ನೋಡಿದ ಪೊಲೀಸರು ದಂಡವನ್ನು ಹಾಕಿ ದ್ದಾರೆ

ಮಾಸ್ಕ್ ಧರಿಸದ ಪಾಲಿಕೆ ಸಿಬ್ಬಂದಿಗಳಿಗೂ ಮತ್ತು ಸಾರಿಗೆಯ ಸಿಬ್ಬಂದಿಗಳಿಗೆ ದಂಡವನ್ನು ವಿಧಿಸಿದ್ದಾರೆ ಪೊಲೀಸರು.ಮಾಸ್ಕ್ ಧರಿಸದೇ ಬಂದ ಸಿಬ್ಬಂದಿ ಗಳಿಗೆ ದಂಡ ವಿಧಿಸಿದ ಪೊಲೀಸರು ಇದರೊಂದಿಗೆ ಬಿಸಿ ಮುಟ್ಟಿಸಿದ್ದಾರೆ

ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ವಾಹನ ತಪಾ ಸಣೆ ವೇಳೆ ದಂಡ ವಿಧಿಸಿದ್ದಾರೆ ಪೊಲೀಸರು.ಪಾಲಿಕೆ ಹಾಗೂ ಸಾರಿಗೆ ಸಿಬ್ಬಂದಿಗಳಿಗೆ ಮಾಸ್ಕ್ ಧರಿಸದ್ದಕ್ಕೆ 250 ದಂಡ ವಿಧಿಸಿದ ಪೊಲೀಸರು ನಂತರ ಕಳಿಸಿ ಕೊಟ್ಟರು.