ಇಬ್ಬರು ಶಿಕ್ಷಕರು ಅಮಾನತು ಡಿಡಿಪಿಐ ಅಮಾನತು ಮಾಡಿ ಆದೇಶ…..

Suddi Sante Desk

ತುಮಕೂರು

ನಿರಂತರವಾಗಿ ಗೈರು ಹಾಜರಾಗುತ್ತಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ತುಮಕೂರಿ ನಲ್ಲಿ ಡಿಡಿಪಿಐ ಎಂ.ರೇವಣ ಸಿದ್ದಪ್ಪ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಮಧುಗಿರಿ ತಾಲ್ಲೂಕಿನ ಪುರವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕ ಸಿ.ಮಂಜುನಾಥ್ ಮತ್ತು ಸಜ್ಜೆಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕ ಟಿ.ಎಸ್.ಸಿದ್ದೇಶ್ವರ್ ಅಮಾನತುಗೊಂಡ ಶಿಕ್ಷಕ ರಾಗಿದ್ದಾರೆ.

ಪುರವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಿ.ಮಂಜುನಾಥ್ ಅವರು 2018ರಿಂದ 2022ರ ಅವಧಿ ಯಲ್ಲಿ 74 ದಿನಗಳ ಕಾಲ ಪದೇ ಪದೇ ಗೈರಾಗಿದ್ದರು

ಸಜ್ಜೆಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಟಿ.ಎಸ್.ಸಿದ್ದೇಶ್ವರ್ 2022 ಮೇ 17ರಿಂದ ಇಲ್ಲಿಯವರೆಗೂ ನಿರಂತರವಾಗಿ ಗೈರುಹಾಜರಾಗಿದ್ದಾರೆ ಹೀಗಾಗಿ ಡಿಡಿಪಿಐ ಅಮಾನತು ಮಾಡಿ ಆದೇಶ ಮಾಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.