ಭೀಕರ ಅಪಘಾತ ಸ್ಥಳದಲ್ಲೇ ನಾಲ್ವರು ಸಾವು – ಬಸ್ ಒಮ್ನಿ ನಡುವೆ ಅಪಘಾತ…..

Suddi Sante Desk

ಶಿವಮೊಗ್ಗ

ಬಸ್ ಮತ್ತು ಒಮ್ನಿ ಕಾರ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವಿಗೀಡಾಗಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಸಮೀಪ ನಡೆದಿದೆ. ಖಾಸಗಿ ಬಸ್ ಮತ್ತು ಓಮ್ನಿ ನಡುವೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿ ದ್ದಾರೆ.ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯ ಗೊಂಡಿದ್ದಾರೆ.ತಾಳಗುಪ್ಪ ಸಮೀಪದ ಬಳೆಗಾರು ಬಳಿ ಈ ಒಂದು ಅಪಘಾತ ಸಂಭವಿಸಿದೆ.

ಇನ್ನೂ ಅಪಘಾತದಲ್ಲಿ ಮೃತಪಟ್ಟವರು ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದವರಾಗಿದ್ದು ಜೋಗ ಪ್ರವಾಸಕ್ಕೆ ತೆರಳು ತ್ತಿದ್ದ ವೇಳೆಯಲ್ಲಿ ಎದುರಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ.

ಸಾಗರ ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಪಘಾತದ ಬಳಿಕ ಬಸ್ ಚಾಲಕ ಪರಾರಿಯಾಗಿದ್ದಾನೆ.ಅಪಘಾತದ ನಂತರ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.