ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ಶೇ 4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಮಾಡಿದ ಕೇಂದ್ರ ಸರ್ಕಾರ…..

Suddi Sante Desk

ನವದೆಹಲಿ –

ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ ಹೌದು ತುಟ್ಟಿಭತ್ಯೆಯ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಕೊನೆಗೂ ಗುಡ್‌ ನ್ಯೂಸ್‌ ಸಿಕ್ಕಿದ್ದು ಶೀಘ್ರದಲ್ಲಿಯೇ ಅದನ್ನು ಜಾರಿಗೊಳಿಸಲಾಗುತ್ತಿದೆ. ಸೆಪ್ಟೆಂಬರ್ 28ರಂದು ತುಟ್ಟಿಭತ್ಯೆ ಹೆಚ್ಚಳದ ಅಧಿಕೃತ ಘೋಷಣೆ ಮಾಡಲಾಗುತ್ತೆ ಇನ್ನೂ ಈ ಮೂಲಕ ಅಕ್ಟೋ ಬರ್ 1ರಿಂದ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆಯಾಗ ಲಿದೆ.

ಅಂದ ಹಾಗೆ ಈಗಾಗಲೇ ಅರ್ಧವಾರ್ಷಿಕ ಅಂಕಿ ಅಂಶಗ ಳನ್ನ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಬಿಡುಗಡೆ ಮಾಡಿದೆ. ಇದರಲ್ಲಿ ಸೂಚ್ಯಂಕ 0.2 ಪಾಯಿಂಟ್ ಏರಿಕೆ ಕಂಡು 129.2ಕ್ಕೆ ತಲುಪಿದೆ. ಈ ಸೂಚ್ಯಂಕ ಏರಿಕೆಯಿಂ ದಾಗಿ ಡಿಎಯಲ್ಲಿ ಶೇ.4ರಷ್ಟು ಏರಿಕೆಯಾಗುವುದು ಗ್ಯಾರೆಂಟಿ ಎಂದು ತಜ್ಞರು ಹೇಳುತ್ತಿದ್ದಾರೆ.ಅಂದಹಾಗೆ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನ ನಿರ್ಧರಿಸಲು AICPI IW ಸೂಚ್ಯಂಕದ ದತ್ತಾಂಶವನ್ನ ಬಳಸುತ್ತದೆ.38% ಡಿಎ ಹಣ ಕೈ ಸೇರುವುದು ಯಾವಾಗ.ತುಟ್ಟಿಭತ್ಯೆಯಲ್ಲಿ ಸಧ್ಯ ಶೇ.4ರಷ್ಟು ಹೆಚ್ಚಳವಾಗಲಿದ್ದು, ನೌಕರರ ಒಟ್ಟು ತುಟ್ಟಿ ಭತ್ಯೆ ಶೇ.38ಕ್ಕೆ ತಲುಪಿದೆ. ಇನ್ನು ಈ ಹೊಸ ತುಟ್ಟಿಭತ್ಯೆಯನ್ನ ಸೆಪ್ಟೆಂಬರ್ 2022ರ ವೇತನದಲ್ಲಿ ಪಾವತಿಸಲಾಗುತ್ತೆ. ಇದರಲ್ಲಿ ಜುಲೈ, ಆಗಸ್ಟ್ ಎರಡು ತಿಂಗಳ ಬಾಕಿ ಹಣವೂ ಇರಲಿದ್ದು, ಹೊಸ ತುಟ್ಟಿಭತ್ಯೆಯನ್ನ ಜುಲೈ 1, 2022 ರಿಂದ ಅನ್ವಯಿಸುವಂತೆ ಪರಿಗಣಿಸಲಾಗುತ್ತದೆ.ಇದು ಒಂದು ವಿಚಾರವಾದರೆ ಇನ್ನೂ ರಾಜ್ಯದ ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ಗುಡ್ ನ್ಯೂಸ್ ನ್ನು ರಾಜ್ಯ ಸರ್ಕಾರ ನೀಡದಿರೊದು ಬೇಸರದ ಸಂಗತಿಯಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.