ಪಾಣಿಪತ್ –
17 ವರ್ಷದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯೊಬ್ಬರು ಓಡಿಹೋಗಿ ಇದರಿಂದ ಕಂಗಾಲಾದ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ ಘಟನೆ ಯೊಂದು ಹರಿಯಾಣದ ಪಾಣಿಪತ್ ನಲ್ಲಿ ನಡೆದಿದೆ. ಹರ್ಯಾಣದ ಪಾಣಿಪತ್ ನಲ್ಲಿ ಘಟನೆ ನಡೆದಿದೆ. ಪಾಣಿಪತ್ನ ದೇಶರಾಜ್ ಕಾಲೋನಿಯಲ್ಲಿರುವ ಖಾಸಗಿ ಕಾಲೇಜ್ ವೊಂದರಲ್ಲಿ ಶಿಕ್ಷಕಿಯಾಗಿರುವ ಮಹಿಳೆ ಮದುವೆಯಾಗಿ ವಿಚ್ಚೇದನ ಪಡೆದುಕೊಂ ಡಿದ್ದು, ತಾಯಿ ಮನೆಯಲ್ಲಿ ವಾಸವಾಗಿದ್ದಾಳೆ.
ಆಕೆ ಕಳೆದ ಎರಡು ವರ್ಷಗಳಿಂದ ಹುಡುಗನಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು.17 ವರ್ಷದ ಬಾಲಕ 11 ನೇ ತರಗತಿ ಓದುತ್ತಿದ್ದಾನೆ. ಲಾಕ್ ಡೌನ್ ಜಾರಿ ಯಲ್ಲಿದ್ದ ಕಾರಣ 2 ಗಂಟೆ ಟ್ಯೂಷನ್ ಹೇಳಿಕೊಡು ತ್ತಿದ್ದ ಶಿಕ್ಷಕಿ ನಂತರದಲ್ಲಿ ದಿನ 4 ಪಾಠ ಮಾಡತೊಡಗಿ ದ್ದಾರೆ. ಈ ನಡುವೆ ಟೀಚರ್ ಮತ್ತು ವಿದ್ಯಾರ್ಥಿ ನಡುವೆ ಪ್ರೀತಿ ಚಿಗುರಿದ್ದು ಮೇ 29 ರಂದು ಇಬ್ಬರು ಪರಾರಿಯಾಗಿದ್ದಾರೆ.ಟೀಚರ್ ಮನೆಯಲ್ಲಿ ವಿಚಾರಿಸಿ ದ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ದೂರು ನೀಡಿ ದ್ದಾರೆ.ಶಿಕ್ಷಕಿ ವಿರುದ್ಧ ಅಪಹರಣ ಪ್ರಕರಣ ದಾಖಲಿ ಸಲಾಗಿದೆ.ಇಬ್ಬರೂ ಫೋನ್ ಸ್ವಿಚ್ ಆಫ್ ಆಗಿದ್ದು ಕುತೂಹಲಕಾರಿ ಸಂಗತಿಯೆಂದರೆ ಇಬ್ಬರೂ ಮನೆ ಯಿಂದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ.ಬೆಲೆಬಾಳುವ ವಸ್ತುಗಳ ಪೈಕಿ ಶಿಕ್ಷಕಿ ಕೈಯಲ್ಲಿ ಕೇವಲ ಒಂದು ಚಿನ್ನದ ಉಂಗುರವಿದೆ. ಸಧ್ಯ ದೂರು ದಾಖಲು ಮಾಡಿಕೊಂಡಿರು ಪೊಲೀಸ ರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.