ಆರು ತಿಂಗಳಲ್ಲಿ ಶಿಕ್ಷಣ ಇಲಾಖೆ ಆನ್ ಲೈನ್ ಸಚಿವ ಬಿ ಸಿ ನಾಗೇಶ್ ಹೊಸ ರೂಪ ಪಡೆದುಕೊಳ್ಳಲಿದೆ ಇಲಾಖೆ…..

Suddi Sante Desk

ಬೆಂಗಳೂರು

ಶಿಕ್ಷಣ ಇಲಾಖೆಯ ಸಾಧ್ಯವಾದಷ್ಟು ಕೆಲಸಗಳನ್ನು ಆರು ತಿಂಗಳಲ್ಲಿ ಆನ್ ಲೈನ್ ಗೊಳಿಸಲಾಗುತ್ತದೆ.ಕಡತ ವಿಲೇ ವಾರಿಗೆ ಇ- ಆಫೀಸ್ ಬಳಕೆ ಕಡ್ಡಾಯಗೊಳಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಪತ್ರಿಕೆಯೊಂದು ಆಯೋಜನೆ ಮಾಡಿದ್ದ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ ಅವರು ಇಲಾಖೆಗೆ ಹೊಸ ರೂಪ ನೀಡಲು ನಡೆಸಿರುವ ಪ್ರಯತ್ನಗಳನ್ನು ವಿವರಿಸಿದರು.

ಲಂಚಗುಳಿತನಕ್ಕೆ ಬ್ರೇಕ್ ಹಾಕಲು ‘ಆಟೋಮೇಷನ್’ ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ‘ಸಾಮರ್ಥ್ಯವೃದ್ಧಿ’ಗೆ ವಿಶೇಷ ಪ್ರಯತ್ನ,ಆಧಾರ್ ನೆರವು ಬಳಸಿ ‘ಟ್ರಾಯಕಿಂಗ್’, ಕಾಲ ಮಿತಿಯಲ್ಲಿ ನೇಮಕ ಪ್ರಕ್ರಿಯೆ ಮುಗಿಸುವುದು ಸೇರಿದಂತೆ ವಿವಿಧ ಕ್ರಮಗಳ ಮೂಲಕ ಇಲಾಖೆಗೆ ಹೊಸ ಹೊಳಪು ನೀಡಲಾಗುತ್ತಿದೆ.ಇ-ಆಫೀಸ್ ವ್ಯವಸ್ಥೆಯಲ್ಲಿ ಸಂಬಂಧ ಪಟ್ಟವರು ಕಾಲಮಿತಿಯಲ್ಲಿ ಕಡತ ವಿಲೇವಾರಿ ಮಾಡದಿ ದ್ದರೆ ಮುಂದಿನ ಅಧಿಕಾರಿಗೆ ರವಾನೆಯಾಗುತ್ತಲ್ಲದೇ ಸಂಬಂಧಪಟ್ಟವರಿಗೆ ನೋಟಿಸ್ ಕೂಡ ಜಾರಿಯಾಗುತ್ತದೆ ಎಂದು ತಿಳಿಸಿದರು.ಶಿಕ್ಷಕರಿಗೆ ಆಗುತ್ತಿರುವ ಅನೇಕ ಅಡ ಚಣೆಗಳು ಇ-ಆಫೀಸ್ ಮೂಲಕ ಬಗೆಹರಿಯಲಿದ್ದು ಅವ್ಯವಹಾರಕ್ಕೂ ಅವಕಾಶ ಇಲ್ಲವಾಗುತ್ತದೆ.ಅಲ್ಲದೇ ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಆಗಲಿದೆ ಎಂಬ ನಿರೀಕ್ಷೆ ಸಚಿವರದ್ದಾಗಿದೆ.

ಇನ್ನೂ ಶಿಕ್ಷಕರ ಕೊರತೆ ನಿವಾರಣೆಗಾಗಿ 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ.ಕಲ್ಯಾಣ ಕರ್ನಾಟಕ ಭಾಗಕ್ಕೆಂದೇ 5 ಸಾವಿರ ನೇಮಕಾತಿ ಮಾಡಿಕೊಳ್ಳಲಾಗು ತ್ತಿದೆ.ಅರ್ಹರು ಸಿಗದಿದ್ದಲ್ಲಿ 2023ರ ಫೆಬ್ರವರಿಯಲ್ಲಿ ಮತ್ತೊಮ್ಮೆ ಸಿಇಟಿ ನಡೆಸಲಾಗುತ್ತದೆ.ಅದಕ್ಕೂ ಮುನ್ನ ಅಂದರೆ 2022 ನವೆಂಬರ್ ನಲ್ಲಿ ಟಿಇಟಿಯನ್ನೂ ನಡೆಸ ಲಾಗುತ್ತಿದೆ.ಇದರಿಂದ ಮತ್ತಷ್ಟು ಅರ್ಹರು ಲಭ್ಯರಾಗುತ್ತಾರೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.