ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ ನೇಣು ಬೀಗಿದುಕೊಂಡು ಸಾವಿಗೆ ಶರಣಾದ ಯುವ ರೈತ

Suddi Sante Desk
ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ ನೇಣು ಬೀಗಿದುಕೊಂಡು ಸಾವಿಗೆ ಶರಣಾದ ಯುವ ರೈತ

ರಾಯಚೂರು

ಸಾಲಬಾಧೆ ತಾಳಲಾರದೆ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ.ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಈ ಒಂದು  ಘಟನೆೆ ನಡೆದಿದೆ.

 

 

ಗುಂಜಳ್ಳಿ ಗ್ರಾಮದ ರಾಮನಗೌಡ (32) ಆತ್ಮಹತ್ಯೆಗೆ ಶರಣಾದ ರೈತನಾಗಿದ್ದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರೋ ರೈತ ರಾಮನಗೌಡ.ಬ್ಯಾಂಕ್ ಹಾಗೂ ಖಾಸಗಿ ಸೇರಿ 15ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದ ರೈತ.

ಜಮೀನಿನಲ್ಲಿ ಈ ಬಾರಿ ಬೆಳೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೇ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.