ಶಿಕ್ಷಕರ ಮೇಲೆ ಸುಳ್ಳು ಪ್ರಕರಣ ದಾಖಲು – ಸಿಡಿದೆದ್ದ ಪೋಷಕರು ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ ಆಕ್ರೋಶ…..

Suddi Sante Desk
ಶಿಕ್ಷಕರ ಮೇಲೆ ಸುಳ್ಳು ಪ್ರಕರಣ ದಾಖಲು – ಸಿಡಿದೆದ್ದ ಪೋಷಕರು ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ ಆಕ್ರೋಶ…..

ರಿಪ್ಪನ್ ಪೇಟೆ –

ಶಿಕ್ಷಕರಿಬ್ಬರ ಮೇಲೆ ಸುಳ್ಳು ದೂರನ್ನು ದಾಖಲು ಮಾಡಿರುವ ವಿಚಾರ ಕುರಿತಂತೆ ಇದರ ವಿರುದ್ದ ವಿದ್ಯಾರ್ಥಿಗಳು ಪೋಷಕರು ಬೃಹತ್  ಪ್ರತಿಭಟನೆ ಮಾಡಿದ ಘಟನೆ ರಿಪ್ಪನ್ ಪೇಟೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿನ ಶಿಕ್ಷಕರಿಬ್ಬರ ಮೇಲೆ ದುರುದ್ದೇಶದಿಂದ ಪೋಕ್ಸೊ ಕಾಯಿದೆಯ ಸುಳ್ಳು ಪ್ರಕರಣ ದಾಖಲಿ ಸಿರುವ ಕ್ರಮ ವಿರೋಧಿಸಿ ಶಾಲಾಭಿವೃದ್ಧಿ ಸಮಿತಿ ಯವರು ಪೋಷಕರು ಹಾಗೂ ಸಾರ್ವಜನಿಕರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಸೇರಿ ಧರಣಿ ನಡೆಸಿದರು.

ನಮ್ಮ ಶಿಕ್ಷಕರು ಬರುವವರೆಗೂ ನಾವು ತರಗತಿಗೆ ಹೋಗುವುದಿಲ್ಲ ಎಂದು ಹಠ ಹಿಡಿದು ವಿದ್ಯಾರ್ಥಿ ಗಳು, ತಮ್ಮ ಪೋಷಕರೊಂದಿಗೆ ರಾಜ್ಯ ಹೆದ್ದಾರಿ ಯ ಶಾಲಾ ಮುಂಭಾಗ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ್,ಕ್ಷೇತ್ರ ಶಿಕ್ಷಣಾಧಿ ಕಾರಿ ಎಚ್.‌ ಆರ್.ಕೃಷ್ಣಮೂರ್ತಿ ಭೇಟಿ ನೀಡಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬಳಿ ಅಹವಾಲು ಅಲಿಸಿ ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ತಬ್ಬಿ ಬ್ಬಾದ ಅಧಿಕಾರಿಗಳು ಇಂತಹ ವಿಚಾರವನ್ನು ಮಕ್ಕಳ ಎದುರು ಹೇಳಲು ಸಾಧ್ಯವಿಲ್ಲ.ಪೋಷಕ ರೊಂದಿಗೆ ಸಮಾಲೋಚನೆ ನಡೆಸಿ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ ಹಿನ್ನೆಲೆ ಯಲ್ಲಿ ವಿದ್ಯಾರ್ಥಿಗಳು ಸಮಾಧಾನಚಿತ್ತರಾಗಿ ಪೋಷಕರ ಹಾಗೂ ಅಧಿಕಾರಿಗಳ ಸಮಲೋ ಚನೆಗೆ ಸಹಮತ ವ್ಯಕ್ತಪಡಿಸಿದರು.

ಪಾರದರ್ಶಕ ತನಿಖೆಯಿಂದ ಶಾಲಾ ಶಿಕ್ಷಕರನ್ನು ಮತ್ತು ವಿದ್ಯಾರ್ಥಿ ಸಮೂಹದೊಂದಿಗೆ ಪ್ರತ್ಯೇಕ ಮಾಹಿತಿ ಪಡೆದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ಹೇಳಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.ಪ್ರತಿಭ ಟನೆ ನೇತೃತ್ವವನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ, ನಾಗಭೂಷಣ, ಗಣೇಶ್ ಬಿಲ್ಲೇಶ್ವರ,ಸತೀಶ್ ಎಸ್, ರಾಜು ಗರ್ತಿಕೆರೆ, ಅಭಿಷೇಕ, ಕಿರಣಕುಮಾರ್,ರಾಮಪ್ಪ, ಎಚ್.ಎನ್.ಗುರುರಾಜ ಭಂಡಾರಿ, ಸಚಿನ್, ಎನ್.ರಾಘವೇಂದ್ರ, ಸತೀಶ್ ಈರನಬೈಲು, ಕೆ.ವೈ.ಮಂಜುನಾಥ, ಕೆ.ಇ.ಗಣೇಶ್, ಕಿರಣ ಮತ್ತಿತರ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ನಂತರ ಹುಂಚ ನಾಡ ಕಚೇರಿಯವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಉಪ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಇದೇ ವೇಳೆ ತೀರ್ಥಹಳ್ಳಿ ಡಿವೈಎಸ್‌ಪಿ ಅವರಿಗೂ ಮನವಿ ಸಲ್ಲಿಸಲಾಯಿತು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.