ಸವದತ್ತಿ –

ಎಸ್ ಎಸ್ ಎಲ್ ಸಿ ಪರೀಕ್ಷೆ ಕುರಿತು ಸವದತ್ತಿ ಶಾಸಕರು ಹಾಗೆ ಉಪ ಸಭಾಧ್ಯಕ್ಷರು ಕರ್ನಾಟಕ ವಿಧಾನಸಭೆ ಆನಂದ ಚಂ.ಮಾಮನಿ ಇವರ ಅಧ್ಯಕ್ಷತೆಯಲ್ಲಿ ಇಂದು ಮದ್ಯಾಹ್ನ 03.00 ಗಂಟೆಗೆ ತಾಲೂಕ ಪಂಚಾಯತ ಕಾರ್ಯಾಲಯದ ಸಭಾ ಭವನದಲ್ಲಿ ದಿನಾಂಕ 19 ಮತ್ತು 22 ಜುಲೈ 2021 ರಂದು ಸಭೆಯನ್ನು ಕರೆದಿದ್ದಸರೆ.SSLC ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತಂತೆ ಚರ್ಚಿಸಲು ಸಭೆ ಕರೆಯಲಾಗಿದ್ದು ಸದರ ಸಭೆಗೆ ತಹಶೀಲ್ದಾರ್ ಸವದತ್ತಿ. ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು, ಪೋಲಿಸ್ ಇಲಾಖೆಯ ಸಿ.ಪಿ.ಐ, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಸವದತ್ತಿ ಪುರಸಭೆ, ಮುನವಳ್ಳಿ ಪುರಸಭೆ ಹಾಗೂ ಯರಗಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಮತ್ತು ತಾಲೂಕಿನ ಎಲ್ಲ 27 ಪರೀಕ್ಷಾ ಮುಖ್ಯ ಅಧೀಕ್ಷಕರು ಪರೀಕ್ಷಾ ಕಾರ್ಯ. ಮಕ್ಕಳ ಸುರಕ್ಷತೆ. ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಹಶೀಲ್ದಾರ್ ಸವದತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.