ರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ –ಅಂತರ್ ಸೇರಿದಂತೆ ಎಲ್ಲಾ ವರ್ಗಾವಣೆಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

Suddi Sante Desk
ರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ –ಅಂತರ್ ಸೇರಿದಂತೆ ಎಲ್ಲಾ ವರ್ಗಾವಣೆಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

ಬೆಂಗಳೂರು

ಹೌದು ಕಳೆದ ಕೆಲ ದಿನಗಳಿಂದ ವರ್ಗಾವಣೆಗಾಗಿ ಪರದಾಡುತ್ತಿದ್ದ ರಾಜ್ಯದ ಪೊಲೀಸರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ.ರಾಜ್ಯ ಸರ್ಕಾರ ದಿಂದ ಪೊಲೀಸ್ ಇಲಾಖೆಯ ಸಬ್ ಇನ್ಸ್ ಪೆಕ್ಟರ್ ಹುದ್ದೆಯಿಂದ ಕೆಳ ಹಂತದ ಅಧಿಕಾರಿ,ಆಡಳಿತ ಸಿಬ್ಬಂದಿಗಳನ್ನು ಅಂತರ್ ಜಿಲ್ಲೆ, ಘಟಕ ಮತ್ತು ವಲಯ ವರ್ಗಾವಣೆಗೆ ಒಪ್ಪಿಗೆ ಸೂಚನೆ ನೀಡ ಲಾಗಿದೆ.

ಅಲ್ಲದೇ ಈ ವರ್ಗಾವಣೆ ಸಂಬಂಧ ಅಧಿಸೂಚ ನೆಯನ್ನು ಕೂಡಾ ಹೊರಡಿಸುವ ಮೂಲಕ ಪೊಲೀಸರಿಗೆ ಗುಡ್ ನ್ಯೂಸ್ ನೀಡಿದೆ.ರಾಜ್ಯ ಸರ್ಕಾರಕ್ಕೆ ಡಿಜಿ,ಐಜಿಪಿ ಪ್ರವೀಣ್ ಸೂದ್ ಈ ಒಂದು ಪೊಲೀಸ್ ವರ್ಗಾವಣೆ ಸಂಬಂಧ ನಿಯಮ ಮರು ಜಾರಿಗೆ ಅನುಮತಿ ನೀಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.ಇದಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು

ಈ ಬೆನ್ನಲ್ಲೇ ಸರ್ಕಾರ ಈಗ ಅಂತರ್ ಜಿಲ್ಲೆ, ಘಟಕ ಮತ್ತು ವಲಯ ವರ್ಗಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ.ಸರ್ಕಾರ ಹೊರಡಿಸಿರುವಂತ ಅಧಿಸೂಚನೆಯಲ್ಲಿ ಪಿಎಸ್‌ಐ, ಎಎಸ್‌ಐ, ಹೆಡ್ ಕಾನ್ ಸ್ಟೇಬಲ್, ಕಾನ್ ಸ್ಟೇಬಲ್, ಎಫ್ ಡಿಸಿ, ಎಸ್ ಡಿಸಿ ಮತ್ತು ದಲಾಯತ್ ಗಳ ಅಂತರ್ ಜಿಲ್ಲೆ, ಘಟಕ, ಕಮಿಷನರೇಟ್ ಹಾಗೂ ವಲಯ ವಾರು ವರ್ಗಾವಣೆಗೆ ಆಯಾ ವಿಭಾಗದ ಮುಖ್ಯ ಸ್ಥರಿಗೆ ಅಧಿಕಾರವನ್ನು ನೀಡಲಾಗಿದೆ.ಈ ಮೂಲಕ ಪೊಲೀಸರ ವೈಯಕ್ತಿಕ ಸಮಸ್ಯೆ ಕಾರಣಕ್ಕೆ ವರ್ಗಾವಣೆಗೆ ಸರ್ಕಾರ ಸ್ಪಂದಿಸಿದಂತೆ ಆಗಿದೆ.

ಅಂದಹಾಗೇ ರಾಜ್ಯ ಸರ್ಕಾರ 2021ರಲ್ಲಿ 1977 ರಿಂದ ಅಂತರ ಜಿಲ್ಲಾ ವರ್ಗಾವಣೆಗೆ ಇದ್ದ ನಿಯ ಮಕ್ಕೆ ತಿದ್ದುಪಡಿ ತಂದು ರದ್ದುಗೊಳಿಸಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾ ಗಿತ್ತು.ಈ ನಿಯಮವನ್ನು ಮರು ಜಾರಿಗೊಳಿಸು ವಂತೆ ಸರ್ಕಾರಕ್ಕೆ ಡಿಜಿ-ಐಜಿಪಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಈಗ ಮತ್ತೆ ಅಂತರ್ ಜಿಲ್ಲೆ, ಘಟಕ ಮತ್ತು ವಲಯ ವರ್ಗಾವ ಣೆಯನ್ನು ಮರು ಜಾರಿಗೊಳಿಸಲಾಗಿದ್ದು ಚುನಾ ವಣೆಯ ಸಮಯದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪೊಲೀಸರಿಗೆ ವರ್ಗಾವಣೆಯ ಭಾಗ್ಯ ನೀಡಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.