ಕುಮಿಲಿ –
ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಹೈಸ್ಕೂಲ್ ಶಿಕ್ಷಕಿಯಾದ ಕೇರಳದ ಛೋಟ್ಟುಪರಾ ನಿವಾಸಿ ಸೆಲ್ವಮರಿಯನ್ನು ರಾಜ್ಯಪಾಲ ಆರೀಫ್ ಮೊಹಮ್ಮ ದ್ ಖಾನ್ ರಾಜಭವನಕ್ಕೆ ಆಹ್ವಾನಿಸಿ ಅಭಿನಂದಿಸಿ ಗೌರವಿಸಿದರು.ಬಾಲ್ಯದ ದಿನಗಳಿಂದಲೂ ಸೆಲ್ವಮರಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ರಜಾದಿನ ಗಳಲ್ಲಿ ತಮ್ಮ ತಾಯಿಯ ಜತೆ ಏಲಕ್ಕಿ ತೋಟದಲ್ಲಿ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿ ನಿಲ್ಲುತ್ತಿದ್ದ ಸೆಲ್ವಮರಿ, ಕೆಲಸದ ನಡುವೆಯೂ ಓದಿನ ಲ್ಲೂ ಶ್ರಮವಹಿಸಿ ಇಂದು ಹೈಸ್ಕೂಲ್ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ.ಈ ಮೂಲಕ ಕುಟುಂಬದ ಸಂಕಷ್ಟಗಳನ್ನು ಇನ್ನಷ್ಟು ದೂರ ಮಾಡಿದ್ದಾರೆ.

ಸೆಲ್ವಮರಿ ಅವರ ಬಗ್ಗೆ ಮಾಧ್ಯಮಗಳು ಮಾಡಿದ್ದ ವರದಿ ಯನ್ನು ಗಮನಿಸಿ ಆಕೆಯನ್ನು ಕೇರಳ ರಾಜ್ಯಪಾಲರು ರಾಜಭವನಕ್ಕೆ ಆಹ್ವಾನಿಸಿದ್ದಾರೆ.ಈ ಬಗ್ಗೆ ಮಾತನಾಡಿರುವ ಆಕೆ ರಾಜ್ಯಪಾಲರ ಕರೆ ಯನ್ನು ನಿರೀಕ್ಷಿಸಿರಲಿಲ್ಲ.ನನಗೆ ಏನು ಮಾತನಾಡ ಬೇಕೆಂಬುದು ತಿಳಿಯಲಿಲ್ಲ ಎಂದು ಹೇಳಿಕೊಂಡು ತನ್ನ ಯಶಸ್ಸಿನ ಬಗ್ಗೆ ಮಾತನಾಡಿರುವ ಸೆಲ್ವಮರಿ ಮುಂದಿನ ಪೀಳಿಗೆಗೆ ನನ್ನ ಸ್ಟೋರಿ ಸ್ಫೂರ್ತಿ ನೀಡಲಿದೆ ಎಂದಿದ್ದಾರೆ.