BJP ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಕಾಂಗ್ರೇಸ್ ಸೇರ್ಪಡೆ

Suddi Sante Desk
BJP ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಕಾಂಗ್ರೇಸ್ ಸೇರ್ಪಡೆ

ಹುಬ್ಬಳ್ಳಿ

ಬಿಜೆಪಿಯ ಮಾಜಿ ಶಾಸಕ ಯಡಿಯೂರಪ್ಪ ಸಂಭಂದಿ ಎಸ್ ಐ ಚಿಕ್ಕನಗೌಡರ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೆ ಮುಂದಾಗಿದ್ದಾರೆ.ಶೀಘ್ರದಲ್ಲಿಯೇ ಕಾಂಗ್ರೆಸ್ ಸೇರಲಿರೋ ಯಡಿಯೂರಪ್ಪ ಸಂಭಂದಿ SI ಚಿಕ್ಕನಗೌಡರ.

SI ಚಿಕ್ಕನಗೌಡರ ಕುಂದಗೋಳ ಮಾಜಿ ಶಾಸಕ ರಾಗಿದ್ದು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳದಿದ್ದರು ಚಿಕ್ಕನಗೌಡರ.
ಬಿಜೆಪಿ‌ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು ಚಿಕ್ಕನಗೌಡರ.

ಲೋಕಸಭಾ ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಸೇರಲಿರೋ SI ಚಿಕ್ಕನಗೌಡರ.
ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ SI ಚಿಕ್ಕನಗೌಡರ.

ಯಡಿಯೂರಪ್ಪ ಸಂಭಂದಿಯಾಗಿರೋ SI ಚಿಕ್ಕನಗೌಡರ.ಲೋಕಸಭೆ ಚುನಾವಣೆ ಹಿನ್ನಲೆ ಸದ್ದಿಲ್ಲದೆ ಆಪರೇಶನ್ ಆರಂಭಿಸಿದ್ದಾರೆ ಜಗದೀಶ್ ಶೆಟ್ಟರ್.ಬಿಜೆಪಿ ಪ್ರಮುಖ ನಾಯಕ ರನ್ನು ಕಾಂಗ್ರೆಸ್ ನತ್ತ ಸೆಳೆಯುತ್ತಿರೋ ಶೆಟ್ಟರ್.
ಶೆಟ್ಟರ್ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿದ್ದಾರೆ ಚಿಕ್ಕನಗೌಡರ.

ನಿನ್ನೆ ತಮ್ಮ ನಿವಾಸದಲ್ಲಿ ಆಪ್ತರ ಸಭೆ ಕರೆದಿದ್ದ ಚಿಕ್ಕನಗೌಡರ.ಸಭೆಯಲ್ಲಿ ಕಾಂಗ್ರೆಸ್ ಸೇರೋ ದಾಗಿ ಘೋಷಣೆ ಮಾಡಿದ್ದಾರೆ.ನಾನು ಇಲ್ಲೆ ಪಕ್ಷಕ್ಕೆ ಸೇರಿ ಅಂದ್ರೆ ಸೇರತೀನಿ.ಇಲ್ಲ ಬೆಂಗಳೂರು ಗೆ ಬಂದು ಪಕ್ಷಕ್ಕೆ ಸೇರಿ ಅಂದ್ರೆ ನಾನ ನಿಮಗೆಲ್ಲ ತಿಳಸ್ತಿನಿ ಎಂದ ಚಿಕ್ಕನಗೌಡರ.

ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಆಪ್ತರನ್ನು ಕೇಳಿದ ಚಿಕ್ಕನಗೌಡರ.ಆಪ್ತರೆಲ್ಲ ಕಾಂಗ್ರೆಸ್ ಸೇರಿ ಎಂದು ಸಲಹೆಯನ್ನು ನೀಡಿದರು
ಅಧಿವೇಶನ ಮುಗಿಯೋ ಒಳಗಡೆ ಕಾಂಗ್ರೆಸ್ ಸೇರೋಣ ಎಂದು ಸಲಹೆ ನೀಡಿದ ಆಪ್ತರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.