ಧಾರವಾಡ –
ಕಳೆದ 21 ವರ್ಷಗಳ ಕಾಲ ಕಾಂಗ್ರೇಸ್ ಪಕ್ಷದಲ್ಲಿ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತನಾಗಿ ಮುಖಂಡನಾಗಿದ್ದ ಧಾರವಾಡದ ಯುವ ಮುಖಂಡ ಶ್ರೀಧರ್ ಶೇಠ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸಧ್ಯ ಮಹಾನಗರ ಪಾಲಿಕೆಯ ಚುನಾವಣೆ ಹಿನ್ನಲೆಯಲ್ಲಿ ಪಕ್ಷದಲ್ಲಿ ಈವರೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ 23 ರ ವಾರ್ಡ್ ಗೆ ಕೈ ಪಕ್ಷದಿಂದ ಟಿಕೇಟ್ ಕೇಳಿದ್ದಾರೆ.



ಟಿಕೇಟ್ ಕೇಳಿದ ಹಿನ್ನಲೆಯಲ್ಲಿ ಕೊಡಲು ನಿರಾಕರಿಸಿ ದ್ದಾರೆ.ಹೀಗಾಗಿ ಬೇಸತ್ತ ಇವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತ್ರತ್ವದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.ಕಾಂಗ್ರೇಸ್ ಪಕ್ಷದಲ್ಲಿ ಕಳೆದ 21 ವರ್ಷಗಳಿಂದ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳದೇ ಪ್ರಾಮಾಣಿಕವಾಗಿ ಕೆಲಸ ಕಾರ್ಯ ಗಳನ್ನು ಮಾಡುತ್ತಾ ಪಕ್ಷದ ಸಿದ್ದಾಂತ ಕಾರ್ಯಗಳನ್ನು ಚಾಚು ತಪ್ಪದೇ ಮಾಡಿಕೊಂಡು ಬಂದಿದ್ದ ಇವರಿಗೆ ಪಾಲಿಕೆಯ ಚುನಾವಣೆಯಲ್ಲಿ ಟಿಕೇಟ್ ಕೊಡಲು ನಿರಾಕರಿಸಿದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಸಧ್ಯ ಇವರಿಗೆ ಬಿಜೆಪಿ ಪಕ್ಷದಲ್ಲಿ ಟಿಕೇಟ್ ನೀಡುವ ಭರವಸೆಯನ್ನು ನೀಡಿದ್ದಾರೆ ಹೀಗಾಗಿ ವಾರ್ಡ್ 23 ಸಧ್ಯ ಓಬಿಸಿ ಎ ಮೀಸಲಾತಿ ಇದೆ ಹೀಗಾಗಿ ಸ್ಪರ್ಧೆಗೆ ಒಲವು ತೊರಿಸಿದ್ದು ಬಿಜೆಪಿ ಯವರು ಕೂಡಾ ಭರವಸೆಯನ್ನು ನೀಡಿದ್ದಾರೆ ಹೀಗಾಗಿ ಬಿಜೆಪಿ ಪಕ್ಷಕ್ಕೆ ಶ್ರೀಧರ ಶೇಠ್ ಸೇರಿದ್ದಾರೆ,ಪ್ರಕಾಶ್ ಟೀಕಪ್ಪನವರ, ಶಿವು ಶಿರಸಂಗಿ,ಶಶಿಧರ,ಆನಂದ ಶೆಟ್ಟಿ, ಗೋಪಿ ಶಶಿಧರ್,ಉಜ್ಜಿನಿ ಕೊಟ್ರೇಶ,ವಿನಯ ಪಾಟೀಲ್, ಕೃಷ್ಣಾ ಕುಲಕರ್ಣಿ, ಶಶಿ ದಿಕ್ಷೀತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು
