ರಾಜ್ಯದ ಸರ್ಕಾರಿ ನೌಕರರ ಕುರಿತಂತೆ ಸಭೆ ಮಾಡಿದ ಷಡಾಕ್ಷರಿ ಯವರು – ರಾಜ್ಯ ಸರ್ಕಾರಿ ನೌಕರರ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿರುವ ರಾಜ್ಯಾಧ್ಯಕ್ಷರು…..

Suddi Sante Desk
ರಾಜ್ಯದ ಸರ್ಕಾರಿ ನೌಕರರ ಕುರಿತಂತೆ ಸಭೆ ಮಾಡಿದ ಷಡಾಕ್ಷರಿ ಯವರು – ರಾಜ್ಯ ಸರ್ಕಾರಿ ನೌಕರರ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿರುವ ರಾಜ್ಯಾಧ್ಯಕ್ಷರು…..

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರ ಕುರಿತಂತೆ ಸಭೆ ಮಾಡಿದ ಷಡಾಕ್ಷರಿ ಯವರು – ರಾಜ್ಯ ಸರ್ಕಾರಿ ನೌಕರರ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿರುವ ರಾಜ್ಯಾಧ್ಯಕ್ಷರು ಹೌದು

ರಾಜ್ಯದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡುವ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತ್ರತ್ವದಲ್ಲಿ ಮಹತ್ವದ ಸಭೆ ಯೊಂದು ನಡೆಯಿತು.ಹೌದು ಬೆಂಗಳೂರು ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷರು ಅಧಿಕಾರಿಗಳೊಂದಿಗೆ ಈ ಒಂದು ಸಭೆಯನ್ನು ಮಾಡಿದರು.

2022-23ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪರಿಶೀಲನಾ ಸಭೆಯಾಗಿದ್ದು ಬೆಂಗಳೂರು ನಗರ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅತ್ಯುನ್ನತ ಸೇವೆಗೈದ, ಸಾಧನೆಗೈದ ರಾಜ್ಯ ಸರ್ಕಾರಿ ನೌಕರರನ್ನು ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಆಯ್ಕೆ ಮಾಡುವ ಸಂಬಂಧ ಜಿಲ್ಲಾಧಿಕಾರಿ ಕೆ ಎ ದಯಾನಂದ ಇವರ ಅಧ್ಯಕ್ಷತೆಯಲ್ಲಿ ಈ ಒಂದು ಮಹತ್ವದ ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಆಯ್ಕೆ ಸಮಿತಿಯ ಸದಸ್ಯರು ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಸಿ.ಎಸ್.ಷಡಾಕ್ಷರಿರವರು, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ ಎಸ್ ಕಾಂತರಾಜು ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಯಾದ ಪುರುಷೋತ್ತಮ್ ಹಾಗೂ ಕೇಂದ್ರ ಸಂಘದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ ಹಿರಿಯ ಉಪಾಧ್ಯಕ್ಷ ರಾದ ರುದ್ರಪ್ಪ, ಎಸ್ ಬಸವರಾಜು ಉಪಾಧ್ಯಕ್ಷ ರಾದ ಗಿರಿಗೌಡ, ಸಿದ್ದೇಶ್ವರ ಮತ್ತು ರಾಜ್ಯ ಕಾರ್ಯ ದರ್ಶಿಯಾದ ಸದಾನಂದ ನೆಲ್ಕುದ್ರೆ ಹಾಗೂ ಚೇತನ,ಸೇರಿದಂತೆ ಹಲವು ಅಧಿಕಾರಿಗಳು ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.