ರಾಜ್ಯ ಸರ್ಕಾರಿ ನೌಕರರೇ ಗಮನಿಸಿ…..ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಒಂದಿಷ್ಟು ಮಾಹಿತಿ…..

Suddi Sante Desk
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ…..ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಒಂದಿಷ್ಟು ಮಾಹಿತಿ…..

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ…..ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ದಿಂದ ಒಂದಿಷ್ಟು ಮಾಹಿತಿ  ಹೌದು

ರಾಜ್ಯದ ಸರ್ಕಾರಿ ನೌಕರರಿಗಾಗಿ ರಾಜ್ಯ ಸರ್ಕಾರವು ಒಂದಿಷ್ಟು ಮಾಹಿತಿಯನ್ನು ನೀಡಿದೆ ಹೌದು ಆಸ್ತಿ ಮತ್ತು ಋಣ ಪಟ್ಟಿಯನ್ನು ಸಲ್ಲಿಸು ವಂತೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿ ಸಿದೆ.2023-24ನೇ ಸಾಲಿಗೆ ಸಂಬಂಧಿಸಿದಂತೆ ಎಲ್ಲಾ ನೌಕರರು ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಋಣ ಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸು ವುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಅಧಿಕೃತ ಜ್ಞಾಪನ ಹಾಗೂ ಸುತ್ತೋಲೆ ಯಲ್ಲಿ ಸರ್ಕಾರಿ ನೌಕರರು ತಮ್ಮ ಆಸ್ತಿ ಮತ್ತು ಋಣ ಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸಬೇಕೆಂ ತಲೂ ಮತ್ತು ಈ ಪಟ್ಟಿಯನ್ನು ಸಕ್ಷಮ ಪ್ರಾಧಿಕಾರಿ ಗಳು ಪರಿಶೋಧಿಸಬೇಕೆಂತಲೂ ಸೂಚನೆ ನೀಡಲಾಗಿದೆ.

ಅದರಂತೆ ಈ ಕೆಳಕಂಡ ಮಾರ್ಗ ಸೂಚಿಗಳನ್ನು ನೀಡಲಾಗಿದೆ.ಎಲ್ಲಾ ಸರ್ಕಾರಿ ನೌಕರರು (ಗ್ರೂಪ್-ಡಿ ನೌಕರರನ್ನೂ ಒಳಗೊಂಡಂತೆ) ನಡತೆ ನಿಯಮಗಳ 24ರ ಉಪ ನಿಯಮ ರ ತಮ್ಮ ವಾರ್ಷಿಕ ಆಸ್ತಿ ಮತ್ತು ಋಣ ಪಟ್ಟಿಗಳನ್ನು ಮಾರ್ಚ್ 31-2024ಕ್ಕೆ ಅಂತ್ಯಗೊಂಡಿರುವಂತೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ನಿಗದಿತ ಪ್ರಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು.

ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾ ಮಟ್ಟದಲ್ಲಿರುವ ಖಜಾನೆ ಇಲಾಖಾ ಕಚೇರಿಯ,ಕಚೇರಿ ಮುಖ್ಯಸ್ಥರು ಪರಿಶೋಧಿಸುವ ಪ್ರಾಧಿಕಾರಿಗಳಾಗಿ ರುತ್ತಾರೆ.ಪರಿಶೋಧಿಸುವ ಪ್ರಾಧಿಕಾರಿಗಳು ಈ ಪಟ್ಟಿಯಲ್ಲಿ ತೋರಿಸಿರುವ ವ್ಯವಹಾರಗಳು ನಿಯಮಬದ್ಧವಾಗಿದೆಯೇ ಮತ್ತು ನೌಕರರು ಗಳಿಸಿರುವ ಆಸ್ತಿಯು ಅವರು ಸಂಪಾದಿಸಿದ ಆದಾಯಕ್ಕೆ ಅನುಗುಣವಾಗಿದೆಯೇ ಎಂಬು ದನ್ನು ಅತಿ ಜಾಗರೂಕವಾಗಿ ಪರಿಶೋಧಿಸಬೇಕು,

ಹಾಗೆ ಪರಿಶೋಧಿಸಿದ ನಂತರ ಯಾವ ನೌಕರನ ಆಸ್ತಿ ಅವನು ಸಂಪಾದಿಸಿದ ಆದಾಯಕ್ಕಿಂತ ಹೆಚ್ಚಾಗಿದ್ದು, ಅದಕ್ಕೆ ಸಮರ್ಥನೆಯನ್ನು ಆತ ಕೊಡದಿದ್ದಲ್ಲಿ ಅವನ ಮೇಲೆ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ಅಂತಹ ಪ್ರಕರಣಗ ಳನ್ನು ತಪಾಸಣೆಗಾಗಿ ಲೋಕಾಯುಕ್ತಕ್ಕೆ ತಪಾಸಣೆ ಮಾಡಲು ವಹಿಸುವ ಕ್ರಮವನ್ನು ತೆಗೆದುಕೊಳ್ಳಬೇಕು ಹೀಗೆ ಪರಿಶೋಧಿಸಿದ ಫಲಿತಾಂಶವನ್ನು

(ಅನುಬಂಧ -01 ರಲ್ಲಿ ಲಗತ್ತಿಸಿದ) ದೃಢೀಕರಣ ದೊಂದಿಗೆ ಖಜಾನೆ ಆಯುಕ್ತಾಲಯಕ್ಕೆ 2 ತಿಂಗಳೊಳಗಾಗಿ ತಿಳಿಸಬೇಕು.ಗ್ರೂಪ್ ‘ಸಿ’ ಮತ್ತು ‘ಡಿ’ ನೌಕರರಿಗೆ ಸಂಬಂಧಿಸಿದ ಆಸ್ತಿ ಮತ್ತು ಋಣ ಪಟ್ಟಿಯನ್ನು ಖಜಾನೆ ಆಯುಕ್ತಾಲಯಕ್ಕೆ ಕಳುಹಿಸುವ ಅಗತ್ಯವಿರುವುದಿಲ್ಲ. ಆಯಾ ಜಿಲ್ಲಾ ಖಜಾನೆಯ ಹಂತದಲ್ಲಿ ಅದನ್ನು ನಿಯಮಾನು  ಸಾರ ಇರಿಸಿಕೊಳ್ಳಲು ಸೂಚಿಸಲಾಗಿದೆ

ಹಾಗೂ ಅಗತ್ಯಬಿದ್ದಾಗ ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ ಅದನ್ನು ಖಜಾನೆ ಆಯುಕ್ತಾಲ ಯಕ್ಕೆ ತರಿಸಿಕೊಳ್ಳುವ ಅವಕಾಶ ಖಜಾನೆ ಆಯುಕ್ತಾಲಯ ಹೊಂದಿರುತ್ತದೆ.ಗ್ರೂಪ್’ ಎ’ ಮತ್ತು ‘ಬಿ’ ಅಧಿಕಾರಿಗಳು ತಮ್ಮ ಆಸ್ತಿ ಮತ್ತು ಋಣ ಪಟ್ಟಿಗಳನ್ನು ಏಪ್ರಿಲ್ ಅಂತ್ಯದೊಳಗೆ ಖಜಾನೆ ಆಯುಕ್ತಾಲಯಕ್ಕೆ ಸಲ್ಲಿಸುವಂತೆ ಕ್ರಮ ಕೈಗೊಳ್ಳುವುದು.

ಈ ನಿಯಮ ಹಾಗೂ ಸೂಚನೆಗಳನ್ನು ನಿರ್ಲಕ್ಷಿ ಸುವ ನೌಕರರ / ಅಧಿಕಾರಿಗಳ ಮೇಲೆ ನಿಯ ಮಾನುಸಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗು ವುದೆಂದು ಈ ಮೂಲಕ ತಿಳಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್‌ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.