ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ತಡೆ ಜಾಗೃತಿ ಕಾರ್ಯಕ್ರಮ – ಅರ್ಥಪೂರ್ಣವಾಗಿ ನಡೆಯಿತು ಕಾರ್ಯಕ್ರಮ…..

Suddi Sante Desk
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ತಡೆ ಜಾಗೃತಿ ಕಾರ್ಯಕ್ರಮ – ಅರ್ಥಪೂರ್ಣವಾಗಿ ನಡೆಯಿತು ಕಾರ್ಯಕ್ರಮ…..

ಅಳ್ನಾವರ

ಕಡಬಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಯಲ್ಲಿ  ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ತಡೆ ಗಟ್ಟುವಿಕೆ ಹಾಗೂ ನಿರ್ವಹಣೆ ಕುರಿತು ಜಾಗೃತಿ ಮೂಡಿಸ ಲಾಯಿತು.ಇದರ ಜೊತೆಗೆ ವಿಷಮುಕ್ತ ಹಾಗೂ ವಿಷಯುಕ್ತ ಕಸ ಪ್ರತ್ಯೇಕವಾಗಿ ವಿಂಗಡಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.

ದೈನಂದಿನ ಜೀವನದಲ್ಲಿ ಕಸವನ್ನು ಸರಿಯಾಗಿ ವಿಂಗಡಿ ಸುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಹಾಗೂ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯಬಹುದು ಎಂದು ಶಿಕ್ಷಕರು ವಿವರಿಸಿದರು.

ಶಿಕ್ಷಕರಾದ ಡಿ.ಎನ್. ಖಾನಾಪುರ ಮತ್ತು ಸಾವಕ್ಕಾ ಹಿರೇಮಠ ಮಾದಕ ವಸ್ತುಗಳ ದುಷ್ಪರಿಣಾಮಗಳು ಹಾಗೂ ಅವುಗಳಿಂದ ದೂರವಿರುವ ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಇ.ಕೆ. ಹೊನಗೇಕರ ಹಾಗೂ ಸಹಶಿಕ್ಷಕಿ ಪುಷ್ಪ ಶಂಭೋಜಿ ಕಸ ವಿಂಗಡಣೆ ಕುರಿತು ಪ್ರಾಯೋಗಿಕ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಶಿಕ್ಷಕಿಯರಾದ ಮಲ್ಲಮ್ಮ ತಿಪ್ಪಣ್ಣವರ, ಚೆನ್ನಮ್ಮ ಹಿರೇಮಠ, ವಿಜಯಲಕ್ಷ್ಮಿ ಮುಗಳಿಹಾಳ, ದೀಪಾ ಬಾಳೇಕುಂದ್ರಿ, ಮುನಿರಾ ಶೇಖ್, ಸಂಗೀತಾ ಚಲವಾದಿ, ಸುನಿತಾ ನಂದಿಹಳ್ಳಿ ಹಾಗೂ ಆಶಂಬಿ ಹೊಲ್ತಿಕೋಟಿ ಇದ್ದರು.

ಸುದ್ದಿ ಸಂತೆ ನ್ಯೂಸ್ ಅಳ್ನಾವರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.