ಕಸ ಹಾಕಿದವರನ ಕೈಯಲ್ಲಿ ಕಸ ತುಂಬಿಸಿದ ZAC ರಮೇಶ ನೂಲ್ವಿ – SIR ಜೊತೆಯಲ್ಲಿ ಮಿಂಚಿನ ಸಂಚಾರ ಕಸ ಹಾಕಿದವನನ್ನು ಹಿಡಿದು ಕಸ ತುಂಬಿಸಿ ಕಳುಹಿಸಿ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿ ರಮೇಶ ನೂಲ್ವಿ…..

Suddi Sante Desk
ಕಸ ಹಾಕಿದವರನ ಕೈಯಲ್ಲಿ ಕಸ ತುಂಬಿಸಿದ ZAC ರಮೇಶ ನೂಲ್ವಿ – SIR ಜೊತೆಯಲ್ಲಿ ಮಿಂಚಿನ ಸಂಚಾರ ಕಸ ಹಾಕಿದವನನ್ನು ಹಿಡಿದು ಕಸ ತುಂಬಿಸಿ ಕಳುಹಿಸಿ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿ ರಮೇಶ ನೂಲ್ವಿ…..

ಧಾರವಾಡ

ಕಸ ಹಾಕಿದವರನ ಕೈಯಲ್ಲಿ ಕಸ ತುಂಬಿಸಿದ ZAC ರಮೇಶ ನೂಲ್ವಿ – SIR ಜೊತೆಯಲ್ಲಿ ಮಿಂಚಿನ ಸಂಚಾರ ಕಸ ಹಾಕಿದವನನ್ನು ಹಿಡಿದು ಕಸ ತುಂಬಿಸಿ ಕಳುಹಿಸಿ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿ ರಮೇಶ ನೂಲ್ವಿ…..

ಸಧ್ಯ ಸರ್ಕಾರಿ ಅಧಿಕಾರಿಗಳು ಮತದಾರರ ಪಟ್ಟಿಯ ಪರಿಷ್ಕ್ರರ ಣೆಯ ಬ್ಯೂಜಿಯಲ್ಲಿ ತೊಡಗಿದ್ದಾರೆ.ಎಲ್ಲಿ ನೋಡಿದರು ಯಾರನ್ನು ಕೇಳಿದ್ರೂ ಕೂಡಾ SIR SIR ಎನ್ನುತ್ತಿದ್ದು ಇಧರ ನಡುವೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮಾತ್ರ ಬಿಟ್ಟಿಲ್ಲ ಎಂಬೊದಕ್ಕೆ ಧಾರವಾಡದ ದಾಸನಕೊಪ್ಪ ಸರ್ಕಲ್ ನಲ್ಲಿ ಕಂಡು ಬಂದ ಚಿತ್ರಣವೇ ಸಾಕ್ಷಿ.

ಹೌದು ಎಲ್ಲೇಂದರಲ್ಲಿ ಕಸ ಹಾಕುತ್ತಿರುವವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಬಿಸಿಯನ್ನು ಮುಟ್ಟಿಸುತ್ತಿದ್ದಾರೆ.ಎಲ್ಲೇಂದರಲ್ಲಿ ಕಸವನ್ನು ಹಾಕಬೇಡಿ ಎಂದು ಎಷ್ಟೇ ಹೇಳಿದ್ರು ಜಾಗೃತಿ ಮೂಡಿಸಿದರು ಕೂಡಾ ನಿಯಮ ಗಳನ್ನು ಗಾಳಿಗೆ ತೂರಿ ರಸ್ತೆಯ ಪಕ್ಕದಲ್ಲಿಯೇ ಕಸವನ್ನು ಹಾಕಿದವರಿಗೆ ಪಾಲಿಕೆಯ ಅಧಿಕಾರಿಗಳು ದಂಡವನ್ನು ಹಾಕಿ ಬಿಸಿಯನ್ನು ಮುಟ್ಟಿಸಿದರು ಕೂಡಾ ಕಸ ಹಾಕುವವರು ಮಾತ್ರ ಕಡಿಮೆಯಾಗುತ್ತಿಲ್ಲ

ಹೌದು ಹೀಗೆ ಧಾರವಾಡದ ದಾಸನಕೊಪ್ಪ ಸರ್ಕಲ್ ನಲ್ಲಿ ವ್ಯಕ್ತಿಯೊಬ್ಬರು ಗೊತ್ತಿಲ್ಲದಂತೆ ಕಸವನ್ನು ಹಾಕಿ ಇನ್ನೇನು ಹೊರಟಿದ್ದರು ಈ ಒಂದು ಚಿತ್ರಣವನ್ನು ಗಮನಿಸಿದ ವಲಯ ಅಧಿಕಾರಿ ರಮೇಶ ನೂಲ್ವಿ ಯವರು ಕೂಡಲೇ ಕಸವನ್ನು ಹಾಕಿದ ವ್ಯಕ್ತಿಯನ್ನು ಹಿಡಿದು ಅವನಿಂದಲೇ ಹಾಕಿದ ಕಸವನ್ನು ತುಂಬಿಸಿ ಇನ್ನೊಮ್ಮೆ ಕಸವನ್ನು ಹಾಕದಂತೆ ಎಚ್ಚರಿಕೆಯ ಪಾಠವನ್ನು ಮಾಡಿ ಕಳುಹಿಸಿದ್ದಾರೆ.

ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಕಸವನ್ನು ಮತ್ತು ಇತರೆ ತ್ಯಾಜ್ಯವನ್ನು ಸುರಿಯುತ್ತಿದ್ದವರನ್ನು ಪತ್ತೆಹಚ್ಚಿದ್ದಾರೆ ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳಲ್ಲಿ ಕಸ ಅಥವಾ ಕಟ್ಟಡ ತ್ಯಾಜ್ಯಗಳನ್ನು ಸುರಿಯುವುದು ದಂಡನೀಯ ಅಪರಾಧವಾಗಿದ್ದು ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಮುಂದೆಯೂ ಪಾಲಿಕೆ ವತಿಯಿಂದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ರಮೇಶ ನೂಲ್ವಿಯವರು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಸುಂದರ ಹುಬ್ಬಳ್ಳಿ-ಧಾರವಾಡ ನಿರ್ಮಾಣಕ್ಕೆ ಪಾಲಿಕೆ ಯೊಂದಿಗೆ ಕೈಜೋಡಿಸಿ, ನಗರದ ಸ್ವಚ್ಛತೆ ಕಾಪಾಡಿ ಎಂಬ ಸಂದೇಶವನ್ನು ನೀಡಿದ್ದಾರೆ.

ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.