ಕಲಘಟಗಿ –
ಅಧಿಕಾರ ಇರಲಿ ಇಲ್ಲದಿರಲಿ ಜನ ಸೇವೆ ಮುಖ್ಯ ಎಂದುಕೊಂಡು ಈಗಾಗಲೇ ಹತ್ತು ಹಲವಾರು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಮಾಜಿ ಸಚಿವ ಸಂತೋಷ ಲಾಡ್ ಈಗ ಮತ್ತೊಂದು ಜನಪರ ಕಾರ್ಯಕ್ಕೆ ಮುಂದಾಗಿದ್ದಾರೆ.
ಹೌದು ಸೇವೆಗೆ ಅವಕಾಶವನ್ನು ಮಾಡಿಕೊಟ್ಟ ಕ್ಷೇತ್ರದ ಜನರಿಗಾಗಿ ಈಗಾಗಲೇ ಹಲವಾರು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಸಂತೋಷ ಲಾಡ್ ಈಗ ಸೇವೆಯ ಕಾರ್ಯಕ್ಕೆ ಮುಂದಾಗಿದ್ದಾರೆ. ಹೌದು ಕ್ಷೇತ್ರದಲ್ಲಿನ ಜನರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕಾಗಿ ಮೂರು ತುರ್ತು ಚಿಕಿತ್ಸಾ ವಾಹನ ಗಳನ್ನು ಸಿದ್ದ ಮಾಡುತ್ತಿದ್ದಾರೆ.
ತಾವೇ ಸ್ವತಃ ಖರ್ಚನ್ನು ಮಾಡಿ ವಿಶೇಷವಾಗಿ ಅವುಗಳನ್ನು ಸಿದ್ದಮಾಡಿ ಕ್ಷೇತ್ರದ ಜನರ ಸೇವೆಗಾಗಿ ನೀಡುತ್ತಿದ್ದಾರೆ. ಕೇವಲ ತುರ್ತು ಚಿಕಿತ್ಸಾ ವಾಹನ ಗಳನ್ನು ಕೊಟ್ಟರೇ ಸಾಲದು ಆ ಒಂದು ವಾಹನಗಳು ಸರಿಯಾಗಿ ಸಮರ್ಪಕವಾಗಿ ಉಪಯೋಗವಾಗಲಿ ಎಂಬ ಒಂದು ಕಾರಣಕ್ಕಾಗಿ ಅವುಗಳಿಗೆ ಚಾಲಕ, ವೈಧ್ಯರು,ಲ್ಯಾಬ್ ತಂತ್ರಜ್ಞರು,ನರ್ಸ್ ಗಳು ಹೀಗೆ ಎಲ್ಲವನ್ನೂ ನೀಡುತ್ತಿದ್ದಾರೆ.
ಇವರಿಗೆಲ್ಲ ತಾವೇ ವೇತವನ್ನು ನೀಡಿ ಎಲ್ಲಾ ವ್ಯವಸ್ಥೆಯನ್ನು ಮಾಡಿ ಸೇವೆಗೆ ಸಿದ್ದತೆ ಮಾಡುತ್ತಿ ದ್ದಾರೆ.ಈಗಾಗಲೇ ಈ ಮೂರು ತುರ್ತು ಚಿಕಿತ್ಸಾ ವಾಹನಗಳು ಸಿದ್ದಗೊಂಡು ಕ್ಷೇತ್ರದಲ್ಲಿ ಒಂದು ಸುತ್ತು ಸಂಚಾರವನ್ನು ಮಾಡುತ್ತಿವೆ ಪ್ರಾಯೋಗಿಕವಾಗಿ ಸುತ್ತಾಡುತ್ತಿದ್ದು ಸಾಧಕ ಬಾಧಕಗಳನ್ನು ತಿಳಿದು ಕೊಂಡು ಬರುವ ದಿನಗಳಲ್ಲಿ ಯಾವುದೇ ತೊಂದರೆ ಇಲ್ಲದೇ ಕೆಲಸ ಮಾಡಲು ಸಿದ್ದತೆ ಮಾಡುತ್ತಿದ್ದಾರೆ.
ಇನ್ನೂ ಪ್ರಮುಖವಾಗಿ ಮೂಲಭೂತವಾಗಿ ಅವಶ್ಯ ಕವಾಗಿ ಬೇಕಾದ ರಕ್ತದ ತಪಾಸಣೆ, ಸೇರಿದಂತೆ ಹಲವಾರು ಸೇವೆಗಳನ್ನು ಈ ಒಂದು ವಾಹನದಲ್ಲಿ ವ್ಯವಸ್ಥೆಯನ್ನು ಮಾಡಲಾಗಿದ್ದು ವೈದ್ಯರು ಪರೀಕ್ಷೆ ಮಾಡಿ ಔಷಧಿಗಳನ್ನು ಕೂಡಾ ನೀಡುತ್ತಾರೆ. ಹೀಗಾಗಿ ತುಂಬಾ ಮಹತ್ವದ ಅವಶ್ಯಕವಾಗಿರುವ ವ್ಯವಸ್ಥೆ ಯನ್ನು ಮಾಜಿ ಸಚಿವ ಸಂತೋಷ ಲಾಡ್ ಕ್ಷೇತ್ರದ ಜನರಿಗೆ ಒದಗಿಸುತ್ತಿದ್ದಾರೆ.
ಈಗಾಗಲೇ ಇವುಗಳು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದು ಶೀಘ್ರದಲ್ಲೇ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ನೀಡೊದಾಗಿ ಮಾಜಿ ಸಚಿವ ಸಂತೋಷ ಲಾಡ್ ರ ಆಪ್ತ ಸಹಾಯಕ ಹರಿಶಂಕರ ಅವರು ಹೇಳಿದರು