ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗಕ್ಕೆ ಇಂದೇ ಸಿಗಲಿದೆಯಾ ಒಪ್ಪಿಗೆ – ರಾಜ್ಯ ಸರ್ಕಾರಿ ನೌಕರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ…..ರಾಜ್ಯ ಸರ್ಕಾರಿ ನೌಕರರ ಚಿತ್ತ ಸಚಿವ ಸಂಪುಟದತ್ತ…..

Suddi Sante Desk
ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗಕ್ಕೆ ಇಂದೇ ಸಿಗಲಿದೆಯಾ ಒಪ್ಪಿಗೆ – ರಾಜ್ಯ ಸರ್ಕಾರಿ ನೌಕರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ…..ರಾಜ್ಯ ಸರ್ಕಾರಿ ನೌಕರರ ಚಿತ್ತ ಸಚಿವ ಸಂಪುಟದತ್ತ…..

ಬೆಂಗಳೂರು

ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗಕ್ಕೆ ಇಂದೇ ಸಿಗಲಿದೆಯಾ ಒಪ್ಪಿಗೆ  ರಾಜ್ಯ ಸರ್ಕಾರಿ ನೌಕರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ…..ರಾಜ್ಯ ಸರ್ಕಾರಿ ನೌಕರರ ಚಿತ್ತ ಸಚಿವ ಸಂಪುಟದತ್ತ ಹೌದು

7ನೇ ವೇತನ ಆಯೋಗ ಜಾರಿಗೆ ಸೇರಿದಂತೆ ಮೂರು ಪ್ರಮುಖ ಬೇಡಿಕೆ ಈಡೇರಿಕೆ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರಿ ನೌಕರರು ಹೋರಾಟವನ್ನು ಆರಂಭ ಮಾಡಿದ್ದು ಇದರ ನಡುವೆ ಮತ್ತಷ್ಟು ಹೋರಾಟವನ್ನು ತೀವ್ರಗೊ ಳಿಸಲು ಜುಲೈ 27 ರಂದು ಮತ್ತೊಂದು ಮಹತ್ವದ ಸಭೆಯನ್ನು ಕರೆದಿದ್ದು ಇದೇಲ್ಲದರ ನಡುವೆ ಸಧ್ಯ ರಾಜ್ಯ ಸರ್ಕಾರವು ನೌಕರರ ಹೋರಾಟಕ್ಕೆ ಭಯ ಗೊಂಡಂತೆ ಕಾಣುತ್ತಿದ್ದು

ತರಾತುರಿಯಲ್ಲಿ ಸಚಿವ ಸಂಪುಟದ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಕುರಿತಂತೆ ಚರ್ಚೆಯನ್ನು ಮಾಡಿ ಒಪ್ಪಿಗೆ ನೀಡುವ ಉದ್ದೇಶ ದಿಂದ ವಿಷಯವನ್ನು ಸಚಿವ ಸಂಪುಟದ ಸಭೆ ಯಲ್ಲಿ ಸೇರ್ಪಡೆ ಮಾಡಲಾಗಿದೆ.ಹೀಗಾಗಿ ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಇಂದೇ ಸಿಹಿಸುದ್ದಿ ನೀಡುವ ಸಾಧ್ಯತೆ ಇದೆ.

ರಾಜ್ಯ ಸರಕಾರಿ ನೌಕರರಿಗೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯ ಶಿಫಾರಸುಗಳ ಜಾರಿ ಸಂಬಂಧ ಜು.15 ರಂದು ಸಂಜೆ ನಡೆಯಲಿ ರುವ ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯ ಕೈಗೊಳ್ಳುವ ನಿರೀಕ್ಷೆಯಿದೆ. ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು ಸಂಪುಟ ಕಾರ್ಯಸೂಚಿಯಲ್ಲಿ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯ ಶಿಫಾರಸುಗಳ ಜಾರಿ ವಿಷಯ ಸೇರ್ಪಡೆಯಾಗಿದೆ.

ಬೇಡಿಕೆಗಾಗಿ ಮಾಸಾಂತ್ಯದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವ ಎಚ್ಚರಿಕೆಯನ್ನು ನೌಕರ ಸಂಘಟನೆಗಳು ನೀಡಿದ್ದವು. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರದಲ್ಲಿ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.7ನೇ ವೇತನ ಆಯೋಗವು ಶೇ.27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು.

ಮಾರ್ಚ್ 2023 ರಿಂದಲೇ ಶೇ.17 ಮಧ್ಯಂತರ ಪರಿಹಾರ ನೀಡಲಾಗಿದ್ದು, ಇನ್ನು ಗರಿಷ್ಠ ಶೇ.10.5 ವೇತನ ಹೆಚ್ಚಳ ಆಗಬೇಕಿದೆ. 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರಿಗೆ ಅಂತಿಮವಾಗಿ ಶೇ.8 ರಿಂದ ಶೇ.8.5 ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದ್ದು, ಒಟ್ಟಾರೆ ಏರಿಕೆ ಮೂಲವೇತನದ ಶೇ.25 ರಿಂದ ಶೇ.25.5 ತಲುಪುವ ಸಾಧ್ಯತೆಯಿದೆ ಎಂದು ಹೇಳಲಾ ಗುತ್ತಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.