ಸರ್ಕಾರಿ ಶಾಲಾ‌ ಮೈದಾನಗಳನ್ನು ‌ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಸುತ್ತೋಲೆ – ಇಲಾಖೆಯಿಂದ ಹೊರಬಿತ್ತು ಅಧಿಕೃತ ಆದೇಶ…..

Suddi Sante Desk
ಸರ್ಕಾರಿ ಶಾಲಾ‌ ಮೈದಾನಗಳನ್ನು ‌ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಸುತ್ತೋಲೆ – ಇಲಾಖೆಯಿಂದ ಹೊರಬಿತ್ತು ಅಧಿಕೃತ ಆದೇಶ…..

ದಕ್ಷಿಣ ಕನ್ನಡ –

ಸರ್ಕಾರಿ ಶಾಲಾ‌ ಮೈದಾನಗಳನ್ನು ‌ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಸುತ್ತೋಲೆ ಯನ್ನು ಹೊರಡಿಸಲಾಗಿದೆ.ಹೌದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮೈದಾನಗಳನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.ಈ ಕುರಿತಂತೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಿಂದ ಸುತ್ತೋಲೆ ಹೊರಡಿಸಲಾಗಿದೆ

ಸರ್ಕಾರಿ,ಅನುದಾನಿತ,ಅನುದಾನ ರಹಿತ ಶಾಲೆಗಳ ಮೈದಾನ ಮತ್ತು ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಗಳಿಗೆ ಬಳಸಬಾರದಾಗಿ ಸೂಚನೆ ನೀಡಲಾಗಿದೆ.ಅಲ್ಲದೇ ಅನುಮತಿಗಾಗಿ ಶಿಕ್ಷಣ ಇಲಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸದಂತೆಯೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ

ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡ ಬಾರದು ಎಂದುತಿಳಿಸಲಾಗಿದೆ ಆದೇಶವನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಹೊಣೆಗಾರರಾಗುತ್ತಾರೆಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ದಕ್ಷಿಣ ಕನ್ನಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.