ಹುಬ್ಬಳ್ಳಿ –
ಮತಾಂತರ ಆರೋಪದ ಮೇಲೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯ ನವನಗರದ ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನೆಯಲ್ಲಿ ಡಿಸಿಪಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ವಕೀಲನ ಮೇಲೆ ದೂರನ್ನು ದಾಖಲು ಮಾಡಲಾಗಿದೆ.ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ. ರಾಮರಾಜನ್ ಅವರಿಂದ FIR ದಾಖಲಾಗಿದೆ.
ವಕೀಲ ಹಾಗೂ ಹಿಂದೂಪರ ಸಂಘಟನೆಯ ಮುಖಂಡ ಅಶೋಕ ಅಣ್ವೇಕರ ಮೇಲೆ ದೂರು ದಾಖಲಾಗಿದೆ. ಮತಾಂತರ ವಿರೋಧಿಸಿ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ಅಶೋಕ ಅಣ್ವೇಕರ ಡಿಸಿಪಿಯನ್ನ ಅವಾಚ್ಯ ಶಬ್ಧದಿಂದ ನಿಂದಿಸಿದ್ದರು.
ಅಶೋಕ ಅಣೇಕರ ಸೇರಿ ಪ್ರತಿಭಟನೆಯಲ್ಲಿ ಭಾಗಿಯಾ ಗಿದ್ದ 100 ಜನರ ವಿರುದ್ಧ ಎಫ್‌ಐಆರ್ ನ್ನು ಡಿಸಿಪಿ ದಾಖಲು ಮಾಡಿದ್ದಾರೆ.ಅಶೋಕ ಅಣ್ವೇಕರ ಜೊತೆಗಿದ್ದ ಬಜರಂಗದಳ ಹಾಗೂ ಇತರ ಹಿಂದಪರ ಸಂಘಟನೆಯ 100 ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.
ಶಾಂತಿಭಂಗ, ಧರ್ಮನಿಂದನೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ದೂರು.IPC ಸೆಕ್ಷನ್ 504, 143, 147, 153, 295A, 298, 353 ಅಡಿ ದೂರು ದಾಖಲಾಗಿದ್ದು ಸಧ್ಯ ನವನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿಕೊಂಡಿ ರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.