ಬೆಂಗಳೂರು –
ವೃತ್ತಿಯಲ್ಲಿ ಸಾಮಾನ್ಯ ಶಿಕ್ಷಕರಾಗಿರುವ ವೆಂಕಟೇಶಯ್ಯ ಬಿ ಹೆಚ್ ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಗೌರವ ಅಧ್ಯಕ್ಷರಾಗಿ ನೇಮಕಾತಿ ಮಾಡಲಾಗಿದೆ. ಹೌದು ರಾಜ್ಯಾಧ್ಯಕ್ಷ ಷಡಕ್ಷಾರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಒಂದು ತೀರ್ಮಾನ ವನ್ನು ತಗೆದುಕೊಂಡು ಅಧಿಕೃತವಾಗಿ ಆದೇಶವನ್ನು ಹೊರಡಿಸಲಾಗಿದೆ.
ಇನ್ನೂ ಈ ಒಂದು ನೇಮಕಾತಿ ಆದೇಶ ಹೊರ ಬೀಳುತ್ತಿ ದ್ದಂತೆ ಇತ್ತ ರಾಜ್ಯಾಧ್ಯಕ್ಷರಿಗೆ ಅಭಿಮಾನಗಳ ಅಭಿನಂದನೆ ಗಳ ಸುರಿಮಳೆ ಹರಿದು ಬರುತ್ತಿದೆ ಹೌದು ನಮ್ಮ ಹೆಮ್ಮೆಯ ರಾಜ್ಯ ನೌಕರ ಸಂಘದ ಅಧ್ಯಕ್ಷ ರಿಗೆ ಹಾಗೂ ಎಲ್ಲಾ ಸದಸ್ಯ ರಿಗೂ ನನ್ನ ಪ್ರೀತಿಯ ನಮಸ್ಕಾರಗಳು ಇಂದು ರಾಜ್ಯ ನೌಕರರ ಸಂಘಕ್ಕೆ ನನ್ನನು ಗೌರವ ಅಧ್ಯಕ್ಷ ರಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ಆಶ್ಚರ್ಯ ತರಿಸುತ್ತದೆ ಎಂದಿದ್ದಾರೆ
ಏಕೆಂದರೆ ನಾನು ಸಾಮಾನ್ಯರಲ್ಲಿ ಸಾಮಾನ್ಯ ಪ್ರಾಥಮಿಕ ಶಾಲಾ ಶಿಕ್ಷಕ.ಒಬ್ಬ ರೈತನ ಮಗ ನಾನು ಭೋವಿ ಜನಾಂಗದ ವಗ೯ಕ್ಕೆ ಸೇರಿದವನು.ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲ.ಹಣದ ಬೆಂಬಲ.ಯಾವುದು ಇಲ್ಲದ ವನು.ರಜೆ ಬಂದರೆ ರೈತನಾಗುವೆ.ಆದರೂ ನನಗೆ ಈ ಸ್ಥಾನ.ನಾನು ಈ ಸ್ಥಾನಕ್ಕೆ ಅರ್ಹ ವ್ಯಕ್ತಿವೇ ? ನಾನು ನನ್ನ ವೃತ್ತಿಯನ್ನು ಗೌರವಿಸುತ್ತೇನೆ.
ನನಗೆ ರಾಜ್ಯ ನೌಕರರ ಸಂಘದ ಅಧ್ಯಕ್ಷರ ಕೆಲಸ ಕಾರ್ಯ ಗಳನ್ನು ನೋಡಿ ಇಷ್ಟಪಟ್ಟೆ. ಅವರಲ್ಲಿ ಎಂದೂ ಜಾತಿ ಭೇದ ಇಲ್ಲದೆ ಪ್ರೀತಿಯಿಂದ ಅವರ ಮನೆಯಲ್ಲಿ ಒಟ್ಟಿಗೆ ಊಟ ವನ್ನು ಮಾಡಿರುತ್ತೇನೆ.ಅವರ ಜೊತೆ ಪ್ರವಾಸ ಮಾಡಿದ್ದಾಗ ತಮ್ಮ ಸಹೋದರರ ರೀತಿಯಲ್ಲಿ ಅವರು ನಡೆಸಿಕೊಂಡು ಬಂದ ರೀತಿ ನೋಡಿ ಮನಸೋತೆ.ನಾನು ಹುದ್ದೆ ಬಯಸಿದ ವನಲ್ಲ.ನನಗೆ ನಮ್ಮ ಅಧ್ಯಕ್ಷರ ಹೃದಯದಲ್ಲಿ ಸ್ವಲ್ಪ ಸ್ಥಾನ ನೀಡಿದರೆ ಸಾಕು.ನಾನು ಸೇವಾಕನಾಗಿ ಮುಂದುವರೆಯು ತ್ತೇನೆ.ಆದರೂ ಒಬ್ಬ ದಲಿತ ವರ್ಗಕ್ಕೆ ಸೇರಿದ ನನ್ನನು ಪ್ರೀತಿಯಿಂದ ಕಂಡು ನೀನು ನನ್ನ ಜೊತೆ ಇರು ಎಂದು ಅಭಿಮಾನ ತೋರಿದಕ್ಕೆ ಹೃದಯ ಪೂರ್ವಕ ಧನ್ಯವಾದ ಗಳು ಎಂದಿದ್ದಾರೆ ವೆಂಕಟೇಶಯ್ಯ.ಬಿ.ಹೆಚ್ ಅವರು.