ಬೆಂಗಳೂರು –
ಇಂದಿನಿಂದ ಮತ್ತೆ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಆರಂಭ ಗೊಂಡಿದ್ದು ಇದರ ನಡುವೆ ಬಹುತೇಕ ಪ್ರಮಾಣದಲ್ಲಿ ಈ ಒಂದು ವರ್ಗಾವಣೆಯಲ್ಲಿ ಶಿಕ್ಷಕರಿಗೆ ಅವಕಾಶ ಸಿಗದೇ ವಂಚಿತರಾಗಿದ್ದು ಹೀಗಾಗಿ ಅಸಮಾಧಾನಗೊಂಡ ಶಿಕ್ಷಕರು ಬೇಸತ್ತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಹೌದು ಶಿಕ್ಷಕರ ಧ್ವನಿಯಾಗಿ ಕೆಲಸವನ್ನು ಮಾಡಬೇಕಾದ ಸಂಘಟ ನೆಯ ನಾಯಕರು ವರ್ಗಾವಣೆಯ ಕುರಿತಂತೆ ಮಾತನಾ ಡದ ಹಿನ್ನಲೆಯಲ್ಲಿ ಬೇಸತ್ತು ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸಲು ವಿಫಲರಾಗಿದ್ದೀರಿ ಹೀಗಾಗಿ ರಾಜೀ ನಾಮೆಯನ್ನು ಕೊಡಿ.
ಗೌರವಾನ್ವಿತ ಸಂಘದವರೇ ನೈತಿಕ ಹೊಣೆಯನ್ನು ಹೊತ್ತು ಕೊಂಡು ಈ ಕೂಡಲೇ ರಾಜೀನಾಮೆಯನ್ನು ನೀಡಿ ಎಂದು ಒತ್ತಾಯವನ್ನು ಮಾಡಿದ್ದಾರೆ.ಇದರೊಂದಿಗೆ ಈವರೆಗೆ ನಮಗೂ ನಮಗೂ ಈ ಒಂದು ವರ್ಗಾವಣೆಯಲ್ಲಿ ವರ್ಗಾ ವಣೆಯಲ್ಲಿ ಅವಕಾಶ ಸಿಗುತ್ತದೆ ಅದನ್ನು ಸಂಘಟನೆಯ ನಾಯಕರು ಮಾಡಿಸುತ್ತಾರೆ ಎಂದಕೊಂಡು ಕಾಯುತ್ತಿದ್ದ ಶಿಕ್ಷಕರು ಈಗ ಬಹಿರಂಗವಾಗಿಯೇ ಸಂಘಟನೆಯ ನಾಯಕರನ್ನು ರಾಜೀನಾಮೆಯನ್ನು ಕೇಳಿದ್ದಾರೆ.