ಬೆಂಗಳೂರು –
ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ ಹೌದು ರಾಷ್ಟ್ರೀಯ ಪಿಂಚಣೆ ಯೋಜ ನೆಗೆ ಒಳಪಡುವಂತ ಸರ್ಕಾರಿ ನೌಕರರು ಅಧಿಕಾರಿಗಳು ನಿವೃತ್ತಿ,ಮರಣ,ರಾಜೀನಾಮೆಯಂತ ಸಂದರ್ಭದಲ್ಲಿ ತಮ್ಮ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಅನುಮತಿಸಿದೆ ಅಲ್ಲದೇ ಈ ಹಿಂದಿನ ಪ್ರಾನ್ ಖಾತೆಯ ಹಣ ಹಿಂಪಡೆಯುವ ಮಿತಿಯನ್ನು ಮಾರ್ಪಡಿ ಸಿದೆ. ಈ ಮೂಲಕ ರಾಜ್ಯದ ಸರ್ಕಾರಿ ನೌಕರರಿಗೆ ಅವರ ಕುಟುಂಬಸ್ಥರಿಗೆ ಗುಡ್ ನ್ಯೂಸ್ ನೀಡಿದೆ.
ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕುಮಟಾ ಪ್ರಕಾಶ್ ನಡವಳಿ ಹೊರಡಿಸಿದ್ದು ರಾಜ್ಯ ಸರ್ಕಾ ರವು ದಿನಾಂಕ 18-05-2016 ರಲ್ಲಿರುವಂತ ಗರಿಷ್ಠ ಪ್ರಾನ್ ಮೊತ್ತವನ್ನು ಹಿಂಪಡೆಯುವ ಮಿತಿಯನ್ನು ಹೆಚ್ಚಿಸಿ ಮಿತಿಯನ್ನು ಮಾರ್ಪಡಿಸಿದ್ದಾರೆ
ಈ ಹಿಂದೆ ನಿವೃತ್ತಿಯ ನಂತ್ರ 2 ಲಕ್ಷದವರೆಗೆ ಮಾತ್ರ ಎನ್ ಪಿಎಸ್ ಕಾರ್ಪಸ್ ಹಣವನ್ನು ಹಿಂಪಡೆಯಲು ಅವಕಾಶ ವಿತ್ತು ಈ ಮಿತಿಯನ್ನು 5 ಲಕ್ಷದವರೆಗೆ ಹೆಚ್ಚಿಸಿದೆ ಇದಲ್ಲದೇ ಮರಣ ಹೊಂದಿದಂತ ಸಂದರ್ಭದಲ್ಲಿ ನೌಕರರ ನಾಮನಿ ರ್ದೇಶಿತರಿಗೆ ಪ್ರಾನ್ ಖಾತೆಯಲ್ಲಿನ ಮೊತ್ತ 2 ಲಕ್ಷ ಹಿಂಪಡೆ ಯಲು ಅವಕಾಶ ಇದ್ದದ್ದನ್ನು 5 ಲಕ್ಷಕ್ಕೆ ಹೆಚ್ಚಿಸಿದೆ.ಇದಲ್ಲದೇ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವಂತ ಸರ್ಕಾ ರಿ ಅಧಿಕಾರಿ, ನೌಕರರು ರಾಜೀನಾಮೆ ನೀಡಿದಂತ ಸಂದರ್ಭದಲ್ಲಿ ಪ್ರಾನ್ ಖಾತೆಯಲ್ಲಿನ ಹಣ ಹಿಂಪಡೆಯುವ ಮೊತ್ತವನ್ನು 1 ಲಕ್ಷದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.