ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.ಈಗಾಗಲೇ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಮಾಡಿದರು. ಯೋಗೀಶ್ ಹತ್ಯೆ ಪ್ರಕರಣದಲ್ಲಿ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮಾಡಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಬಿಐ ಪರ ವಕೀಲರು ವಾದವನ್ನು ಮಂಡಿಸಿದ್ರು. ಬರೋಬ್ಬರಿ ಒಂದೂವರೆ ಘಂಟೆಗಳ ಕಾಲ ವಾದ ವಿವಾದವನ್ನು ಆಲಿಸಿದರು.
ಸಿಬಿಐ ಪರವಾಗಿ ಭಾರತ ಸರ್ಕಾರದ ಹೆಚ್ಚುವರಿ ಸಾಟಿಟರ್ ದೆಹಲಿಯಿಂದ ವಿಡಿಯೋ ಕಾನ್ಪರನ್ಸ್ ಮೂಲಕ ಜಾಮೀನು ನೀಡದಂತೆ ವಾದ ಮಂಡನೆ ಮಾಡಿದರು. ಸಿಬಿಐ ಪರವಾಗಿ ವಕೀಲರಿಂದ ವಿನಯ ಕುಲಕರ್ಣಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಹೀಗಾಗಿ ಅವರು ಮಾಸ್ಟರ್ ಮೈಂಡ್, ವಿನಯ ತುಂಬಾನೇ ಪ್ರಭಾವಿ ವ್ಯಕ್ತಿ ಜಾಮೀನು ಸಿಕ್ಕರೆ ಸಾಕ್ಷಿ ನಾಶದ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡದಂತೆ ಮನವಿಯೊಂದಿಗೆ ವಾದವನ್ನು ಮಂಡಿಸಿದ್ರು.
ಸಿಬಿಐ ವಕೀಲರಿಂದ ವಾದವನ್ನು ಆಲಿಸಿದ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಸಿ ಎಮ್ ಗಂಗಾಧರ ಅವರು. ಸಿಬಿಐ ವಾದಕ್ಕೆ ಉತ್ತರ ನೀಡುವಂತೆ ವಿನಯ ಪರ ವಕೀಲರಾದ ದನವಾಡೆ ಅವರಿಗೆ ಸೂಚನೆ ನೀಡಿದರು. ಮತ್ತೆ ಕೋರ್ಟ್ ಹಾಲ್‌ಗೆ ನ್ಯಾಯಾಧೀಶರು ಆಗಮಿಸಿ ಕೋರ್ಟ್ ಹಾಲ್‌ನಲ್ಲಿಯೇ ವಿಚಾರಣೆ ಮುಂದುವರೆಸಿ ವಾದ ವಿವಾದವನ್ನು ಆಲಿಸಿ ಅಂತಿಮವಾಗಿ ಜಾಮೀನು ಅರ್ಜಿಯ ಆದೇಶವನ್ನು ಡಿಸೆಂಬರ್ 14 ಕ್ಕೇ ಮುಂದೂಡಿದ್ರು.