ಬೆಳಗಾವಿ –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಈ ಒಂದು ಶಿಕ್ಷಕರ ವರ್ಗಾವಣೆಗೆ ಕೊನೆಗೂ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಬದಲಾವಣೆ ತರಲು ಮುಂದಾಗಿದೆ. ಈ ಒಂದು ಅವೈಜ್ಞಾನಿಕವಾದ ವರ್ಗಾವಣೆಯ ವಿಧೇಯಕವನ್ನು ತಿದ್ದುಪಡಿ ಮಾಡಲು ಮುಂದಾಗಿದ್ದು ಪ್ರಮುಖವಾಗಿ ಏಳು ವಿಧೇಯಕಗಳೊಂದಿಗೆ ಈ ಒಂದು ವಿಧೇಯಕವನ್ನು ಮಂಡನೆ ಮಾಡಲು ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಎಲ್ಲಾ ಸಿದ್ದತೆಗಳೊಂದಿಗೆ ಶಿಕ್ಷಣ ಸಚಿವರ ಕೈಗೆ ಪೈಲ್ ನ್ನು ನೀಡಿದ್ದಾರಂತೆ.
ಕೆಲವೊಂದಿಷ್ಟು ಪ್ರಮುಖವಾದ ಬದಲಾವಣೆಗಳನ್ನು ಮಾಡಿ ಅದರಲ್ಲೂ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ತಮ್ಮ ಸೇವಾವಧಿಯಲ್ಲಿ ತಾವು ಬಯಿಸಿದ ಜಿಲ್ಲೆಗೆ ಒಮ್ಮೆ ಯಾದರೂ ವರ್ಗಾವಣೆ ಭಾಗ್ಯ ಸಿಗಲೆಂಬ ಕಾರಣಕ್ಕಾಗಿ ಉದ್ದೇಶವನ್ನಿಟ್ಟುಕೊಂಡು ಈ ಒಂದು ವರ್ಗಾವಣೆ ವಿಧೇಯಕವನ್ನು ತಿದ್ದುಪಡಿ ಮಂಡನೆ ಮಾಡಲು ಸಿದ್ದತೆ ಯನ್ನು ಮಾಡಿಕೊಂಡಿದ್ದಾರಂತೆ.ಇಂದಿನಿಂದ ಕುಂದಾನಗರಿ ಯಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು ಈ ಒಂದು ಅಧಿವೇಶನದಲ್ಲಿ ಪ್ರಮುಖವಾಗಿ ಏಳು ವಿಧೇಯ ಕಗಳು ಮಂಡನೆಯಾಗಲಿದ್ದು ಇದರಲ್ಲಿ ಈ ಒಂದು ವಿಧೇಯಕವು ಒಂದಾಗಿದ್ದು ಹೀಗಾಗಿ ರಾಜ್ಯದ ಶಿಕ್ಷಕರು ಇದರ ಮೇಲೆ ಬಹಳ ನೀರಿಕ್ಷೆಯನ್ನಿಟ್ಟುಕೊಂಡಿದ್ದು ಯಾವಾಗ ಮಂಡನೆಯಾಗುತ್ತದೆ ಏನೋ ಎಂಬ ನಿರೀಕ್ಷೆ ಯಲ್ಲಿದ್ದಾರೆ.























