ಧಾರವಾಡ –
ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಪೂಜೆಯನ್ನು ಮಾಡಿದರು.ಹೌದು ತಾಲೂಕಿನ ಗರಗ ಗ್ರಾಮದಲ್ಲಿ ರಾಜ್ಯ ನೀರಾವರಿ ಇಲಾಖೆ ಅನುದಾನದಲ್ಲಿ ಗ್ರಾಮದ ಶ್ರೀ ಮಡಿವಾಳೇಶ್ವರರ ಮಠದ ಹತ್ತಿರ ಅಂದಾಜು 2 ಕೋಟಿ ರುಪಾಯಿ ಅನುದಾನದಲ್ಲಿ ನಾಲಾ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು
ಈ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಕಾಶಿಗಾರ ಉಪಾಧ್ಯಕ್ಷರಾದ ಪಕ್ಕೀರಪ್ಪ ಕಟ್ಟಿಮನಿ,ಗ್ರಾಮದ ಪ್ರಮುಖರಾದ ಅರವಿಂದಗೌಡ ಪಾಟೀಲ,ಬಸವರಾಜ ಬುಡರಕಟ್ಟಿ,ವಿಜಯ ಮಗೆಣ್ಣವರ,ಮಹೇಶ ಯಲಿಗಾರ ಸತೀಶ್ ಶಟೋಜಿ,ರಾಜು ಕಟ್ಟಿಮನಿ,ವಿಠ್ಠಲ ಪೂಜಾರ ಸೇರಿದಂತೆ ಅನೇಕ ಗಣ್ಯರು ಗ್ರಾಮದ ಗುರು ಹಿರಿಯರು ಹಾಗೂ ಯುವಮಿತ್ರರು ಉಪಸ್ತಿತರಿದ್ದರು.ಇನ್ನೂ ಧಾರವಾಡ ತಾಲೂಕಿನ ಸೇವಾ ಗ್ರಾಮವೆಂದೆ ಹೆಸರಾದ ಜೀರಿಗಿವಾಡ ಗ್ರಾಮದಲ್ಲಿ ವಿಧಾನ ಪರಿಷತ್ತು ಸದಸ್ಯರು ಹಾಗೂ ದಾನಿಗಳಿಂದ ನಿರ್ಮಾಣವಾಗುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೆ ಭೂಮಿ ಪೂಜೆ ಸಲ್ಲಿಸಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಸಾಬಣ್ಣ ತಳವಾರ,ಗ್ರಾ ಪಂ ಅಧ್ಯಕ್ಷರಾದ ಮಾಂತಯ್ಯ ಹಿರೇಮಠ ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಮಂಜುನಾಥ ಹೊರಕೇರಿ,ಪ್ರಭಾಕರ ದೇಶಪಾಂಡೆ,ಶಿವಾನಂದ ರಬ್ಬಾನಿ,ಎಂ ಎಸ್ ಹೊರಕೇರಿ ಶ್ರೀಮತಿ ಸುನಂದಾ ಕಮತಿ ಸೇರಿದಂತೆ ಅನೇಕ ಗಣ್ಯರು ಗ್ರಾಮದ ಗುರು ಹಿರಿಯರು ಹಾಗೂ ಯುವಮಿತ್ರರು ಉಪಸ್ಥಿತರಿದ್ದರು
ಆತ್ಮಾನಂದ ಜೊತೆ ಗೋಪ್ಯಾ ಸುದ್ದಿ ಸಂತೆ ಟೀಮ್ ಧಾರವಾಡ