ಹುಬ್ಬಳ್ಳಿ –
ಕೇಂದ್ರ ಸರ್ಕಾರದ ಮಾದರಿಯಲ್ಲೇ ವೇತನ ನೀಡಬೇಕು ಹಾಗೇ NPS ರದ್ದುಪಡಿಸಿ OPS ಮರು ಜಾರಿ ಮಾಡುವಂತೆ ಒತ್ತಾ ಯಿಸಿ ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲೆಯ ಸರ್ಕಾರಿ ನೌಕರರ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು ಜಿಲ್ಲಾ ಧ್ಯಕ್ಷ ಸಿದ್ದನಗೌಡ ಪಾಟೀಲ ನೇತೃತ್ವದಲ್ಲಿ ಈ ಒಂದು ಹೋರಾಟವನ್ನು ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಕೆ ಮಾಡಿ ಬೇಡಿಕೆ ಈಡೇರಿಕೆಗೆ ಒತ್ತಾಯವನ್ನು ಮಾಡಿದರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಧಾರವಾಡ ಜಿಲ್ಲೆಯ ವತಿಯಿಂದ ಜಿಲ್ಲಾಧ್ಯಕ್ಷರಾದ ಎಸ್ ಎಫ್ ಸಿದ್ಧನಗೌಡ್ರರವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಕುರಿತು ಮನವಿಯನ್ನು ಸಲ್ಲಿಸಲಾಯಿತು
ಕೇಂದ್ರ ಸರ್ಕಾರಿ ನೌಕರರ ಸರಿಸಮಾನ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೊಳಿಸುವ ಬಗ್ಗೆ ನೂತನ ಪಿಂಚಣಿ ಯೋಜನೆಯನ್ನು ರದ್ದು ಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ
ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜು ಉಪನ್ಯಾಸಕರ ಜ್ವಲಂತ ಸಮಸ್ಯೆಗಳ ಬಗ್ಗೆ ವಿವಿಧ ಇಲಾಖೆಗಳ ನೌಕರರ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ನಿರ್ದೇಶಕರುಗಳು ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಯ ವೃಂದ ಸಂಘದ ಪದಾಧಿಕಾ ರಿಗಳು, ಹಾಗೂ ಸರ್ಕಾರಿ ನೌಕರರು ಹಾಜರಿದ್ದರು ತಾಲ್ಲೂಕ ಅಧ್ಯಕ್ಷರು ಗಳಾದ ವಿ ಎಪ್ ಚುಳಕಿ,ಪ್ರಲ್ಹಾಧ ಗೆಜ್ಜಿ,ಎ ಬಿ ಕೊಪ್ಪದ,ಎಸ್ ಎನ್ ಅರಳಿಕಟ್ಟಿ ,ಎಮ್ ಎಮ್ ಹೊಲ್ತಿಕೋಟಿ,ಎಸ್.ಜಿ.ಸುಬ್ಬಾಪೂರಮಠ,ಪ್ರಧಾನ ಕಾರ್ಯದರ್ಶಿಗಳು ಆರ್ ಬಿ ಲಿಂಗದಾಳ ಗೌರವಾದ್ಯಕ್ಷರು
ದೇವಿದಾಸ ಶಾಂತಿಕರ,ರಾಜ್ಯ ಪರಿಷತ್ ಸದಸ್ಯರು ರಾಜ ಶೇಖರ ಬಾಣದ,ಖಜಾಂಚಿಗಳು,ಗಿರೀಶ ಚೌಡಕಿ,ನೌಕರರ ಭವನ ಕಾರ್ಯದರ್ಶಿಕಾರ್ಯದರ್ಶಿ ಮಂಜುನಾಥ ಯಡಳ್ಳಿ
ಅರೋಗ ಇಲಾಖೆ,ಕಂದಾಯ ಇಲಾಖೆ,ಸರ್ವೆ,ಫಾರೆಸ್ಟ್, ಶಿಕ್ಷಣ ಸೇರಿದಂತೆ ಎಲ್ಲಾ ಇಲಾಖೆಗಳ ಪದಾಧಿಕಾರಿಗಳು ಹಾಜರಿದ್ದರು.